ಪ್ರಮುಖ ಸುದ್ದಿ
ಯಾದಗಿರಿಃ ವಿದ್ಯುತ್ ಅನಾಹುತ – ಯುವ ರೈತ ಮೃತ
ವಿದ್ಯುತ್ ಅನಾಹುತಃ ಯುವ ರೈತ ಮೃತ
ಯಾದಗಿರಿಃ ಜಮೀನೊಂದರಲ್ಲಿ ಕೆಲಸ ಮಾಡುವಾಗ ವಿದ್ಯುತ್ ತಂತಿ ತಗುಲಿ ಯುವ ರೈತ ಮೃತಪಟ್ಟ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ರತ್ತಾಳ ಗ್ರಾಮದಲ್ಲಿ ನಡೆದಿದೆ. ಹೊನ್ನಕೇರಪ್ಪ ಮಲ್ಲಪ್ಪ ಗಡ್ಡದೋರ (28) ಎಂಬ ಯುವಕ ಮೃತ ದುರ್ದೈವಿ.
ಹೊಲದಲ್ಲಿ ಹಾಕಿಸಿದ್ದ ಬೋರವೆಲ್‌ಗೆ ಪಂಪಸೆಟ್ ಅಳವಡಿಸಿದ್ದು, ವಿದ್ಯುತ್ ತಂತಿಯನ್ನು ಕಟ್ಟಿಗೆಯಿಂದ ಮೇಲೆತ್ತಲು ಹೋಗಿ ಕೈಗೆ ತಗುಲಿರುವ ಪರಿಣಾಮ ವಿದ್ಯುತ್ ಹರಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಮೃತನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು.
ಘಟನಾ ಸ್ಥಳಕ್ಕೆ ಜೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಈರಣ್ಣ ಹಳಿಚಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.