ಯಮಧರ್ಮನ ಯಾಮಾರಿಸಲು ಹೋದ ಹುಡುಗ..ಏನಾಯಿತು.?
ದಿನಕ್ಕೊಂದು ಕಥೆ
ಒಂದು ದಿನ ಯಮಧರ್ಮ ಒಬ್ಬ ಹುಡುಗನ ಬಳಿ
ಬಂದು ನುಡಿಯುತ್ತಾನೆ “ಮಾನವ, ಇವತ್ತು ನಿನ್ನ
ಕೊನೆಯ ದಿನ”
ಹುಡುಗ: ಇಲ್ಲಾಗುರು ನಾನಿನ್ನು ಸಾಯೋಕೆ ರೆಡಿ ಆಗಿಲ್ಲಾ. ಇನ್ನು ಬೇಜಾನ್ ಕೆಲ್ಸ ಇದೆ ನಂಗೆ.
ಯಮಧರ್ಮ: ಆದರೆ ವಿಧಿಬರಹ ಹಾಗಿದೆ. ನಿನ್ನ ಹೆಸರೆ ಇವತ್ತು
ಲಿಸ್ಟನಲ್ಲಿ ಮೊದಲಿದೆ.
ಹುಡುಗ: ಓಹ್, ಹೌದಾ? ಆಯ್ತು. ಒಂದ್ ನಿಮಿಷ
ಕೂತ್ಕೊ. ಇಬ್ರೂ ಒಂದ್ ಕಾಫೀ ಕುಡ್ಕೋಂಡ್ ಹೋಗೋಣ.
ಯಮಧರ್ಮ: ಸರಿ ಹಾಗೇ ಆಗಲಿ..
ಹುಡುಗ ಯಮಧರ್ಮನಿಗೆ
ಕಾಫೀಯೊಳಗೆ ನಿದ್ದೆ ಮಾತ್ರೆ ಬೆರೆಸಿ
ಕೊಡ್ತಾನೆ…
ಯಮರಾಜ ಕಾಫೀ ಕುಡಿದು
ಗಡದ್ದಾಗಿ ನಿದ್ದೆ ಮಾಡಿಬಿಡ್ತಾನೆ.
ಹುಡುಗ ಯಮಧರ್ಮನ ಡೆತ್ ಲಿಸ್ಟ್
ತೊಗೊಂಡು
ಮೊದಲಿದ್ದ ತನ್ನ ಹೆಸರನ್ನು ಅಳಿಸಿ
ಕೊನೆಯಲ್ಲಿ ಬರೆದುಬಿಡುತ್ತಾನೆ…
ಯಮಧರ್ಮ ನಿದ್ದೆಯಿಂದ್ದೆದು ಹುಡುಗನಿಗೆ ಹೇಳ್ತಾನೆ:
ನೀ ಕೊಟ್ಟ ಕಾಫೀ
ಅದ್ಭುತವಾಗಿತ್ತು. ಹಾಗಾಗಿ ನಿನಗೆ ಒಂದು ರಿಯಾಯಿತಿ
ಕೊಡ್ತೀನಿ…
ಇವತ್ತು ನನ್ನ ಕೆಲಸವನ್ನು
ಲಿಸ್ಟನ ಕೊನೆಯಿಂದ ಶುರುಮಾಡಲು
ತೀರ್ಮಾನಿಸಿದ್ದೇನೆ. .
ನೀತಿ :-
ಹಣೆಬರಹ ಏನ್ ಮಾಡಿದ್ರೂ ಬದಲಾಗಲ್ಲ ….
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882