ಪ್ರಮುಖ ಸುದ್ದಿ
ಅನಾಥಾಶ್ರಮದಲ್ಲಿ ಜನ್ಮದಿನ ಆಚರಿಸಿಕೊಂಡ ಶಾಸಕ ರಾಜೂಗೌಡರ ಸುಪುತ್ರ.!
ಅನಾಥಾಶ್ರಮಕ್ಕೆ 50 ಸಾವಿರ ದೇಣಿಗೆ ನೀಡಿದ ಮಣಿಕಂಠ ಆರ್. ನಾಯಕ
ಯಾದಗಿರಿಃ ಸುರಪುರ ಕ್ಷೇತ್ರದ ಜನಪ್ರಿಯ ಶಾಸಕ,ಮಾಜಿ ಸಚಿವ ರಾಜೂಗೌಡ ಅವರ ಸುಪುತ್ರ ಮಣಿಕಂಠ ನಾಯಕ ನಿನ್ನೆ ಜಿಲ್ಲೆಯ ಶಹಾಪುರದಲ್ಲಿರು ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ಅನಾಥಾಶ್ರಮಕ್ಕೆ ಭೇಟಿ ಸರಳವಾಗಿ ಅನಾಥಮಕ್ಕಳೊಂದಿಗೆ ತಮ್ಮ ಜನ್ಮ ದಿನಾಚರಣೆ ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ಅನಾಥಾಶ್ರಮಕ್ಕೆ 50 ಸಾವಿರ ರೂ. ದೇಣಿಗೆ ನೀಡುವ ಮೂಲಕ ಚಿಕ್ಕವಯಸ್ಸಿನಲ್ಲೆ ಔದಾರ್ಯ ಮೆರೆದರು. ಮಕ್ಕಳಿಗೆ ಸಿಹಿ ಹಂಚುವ ಮೂಲಕ ಸಂತಸಪಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ಸ್ಥಳೀಯ ನಗರಸಭೆ ಸದಸ್ಯ ಮಲ್ಲಿಕಾರ್ಜುನ ಗಂಗಾಧರಮಠ, ಕೃಷ್ಣಾರಡ್ಡಿ ಮುದನೂರ, ಅಶೋಕ ಡಿಚ್ಚಿ, ಮಲ್ಲಿಕಾರ್ಜುನ ರಡ್ಡಿ, ಪರಶುರಾಮ ನಾಟೇಕಾರ, ಅರವಿಂದ ಟೆಲ್ಲೂರ, ಬಸವರಾಜ ಕಾಶಿರಾಜ ಇತರರಿದ್ದರು.