ವಿದ್ಯುತ್ ಸಮಸ್ಯೆ ಪರಿಹಾರಃ ಸತತ 36 ಗಂಟೆ ಶ್ರಮ ವಹಿಸಿದ ಸಿಬ್ಬಂದಿ
yadgiri,ಶಹಾಪುರಃ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಶುಕ್ರವಾರ ರಾತ್ರಿಯಿಂದಲೇ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದ್ದು, ಶನಿವಾರ ಮತ್ತು ರವಿವಾರ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸರಬರಾಜು ಇಲ್ಲದೆ ನಾಗರಿಕರು ಪರದಾಡುವಂಗತಾಗಿತ್ತು.
ಆದರೆ ಜೆಸ್ಕಾಂನ 15 ಜನರ ತಂಡ ಸತತ 36 ಗಂಟೆ ದುರಸ್ತಿ ಕಾರ್ಯದಲ್ಲಿ ಮುಳುಗಿದ್ದು, ರವಿವಾರ ಸಂಜೆ 7-15 ಕ್ಕೆ ಸಮರ್ಪಕ ಕಾರ್ಯ ಯಶಸ್ವಿಯಾಗಿದ್ದು, ಎಂದಿನಂತೆ ವಿದ್ಯುತ್ ಸರಬರಾಜು ಮಾಡಲಾಗುತ್ತದೆ ಎಂದು ಜೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ಜೆಸ್ಕಾಂ ಕಚೇರಿಯ ವಿದ್ಯುತ್ ಸ್ಟೇಷನ್ನಲ್ಲಿ ಬ್ಯಾಂಕ್ ಫ್ಲಾಷ್ ಓವರ್ ನಲ್ಲಿ ಬೆಂಕಿಹೊತ್ತಿಕೊಂಡು ಪ್ರಮುಖ ವೈರಿಂಗ್ ಎಲ್ಲಾ ಬೆಂಕಿಗಾಹುತಿಯಾಗಿದ್ದವು, ಅದನ್ನು ಸರಿಪಡಿಸಲು 36 ಗಂಟೆ ಬೇಕಾಯಿತು. ನಿದ್ರೆಯೂ ಇಲ್ಲದೆ ಸತತ ಕೆಲಸ ಮಾಡಿದ ಸಿಬ್ಬಂದಿಗಳಿಗೆ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಭೀಮಾಶಂಕರ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಶನಿವಾರದಿಂದ ನಾಗರಿಕರಿಗೆ ವಿದ್ಯುತ್ ವ್ಯಥೆಯಿಂದ ತೊಂದರೆಯಾಗಿದೆ. ವಿದ್ಯುತ್ ಸರಬರಾಜು ಸ್ಟೇಷನ್ನಲ್ಲಿ ಹಠಾತ್ತನೆ ಉಂಟಾದ ಸಮಸ್ಯೆಯಿಂದ ಎರಡು ದಿನ ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆಯಾಗಿತ್ತು. ಇದೀಗ ಸರಿಪಡಿಸಲಾಗಿದ್ದು, ಯಾವುದೇ ಸಮಸ್ಯೆ ತಲೆದೋರುವದಿಲ್ಲ ಎಂದು ಅವರು ತಿಳಿಸಿದ್ದಾರೆ.
—–