ಪ್ರಮುಖ ಸುದ್ದಿ
ಮೂರನೇಯ ಕಂತು ನೆರೆ ಪರಿಹಾರ ಬರಲಿದೆ, ಸಮರ್ಪಕ ವ್ಯವಸ್ಥೆ ಮಾಡಲಿದೆ – ಆರ್.ಅಶೋಕ
ಮೂರನೇಯ ಕಂತು ನೆರೆ ಪರಿಹಾರ ಬರಲಿದೆ, ಸಮರ್ಪಕ ವ್ಯವಸ್ಥೆ ಮಾಡಲಿದೆ – ಆರ್.ಅಶೋಕ
ಯಾದಗಿರಿಃ ನೆರೆ ಹಾವಳಿಗೆ ತತ್ತರಿಸಿದ ಯಾದಗಿರಿ ಜಿಲ್ಲೆಯ ಸುರಪುರ ಕೃಷ್ಣಾ ತೀರ ಪ್ರದೇಶಕ್ಕೆ ಭೇಟಿ ನೀಡಿ ಪ್ರತ್ಯಕ್ಷ ದರ್ಶನ ಪಡೆದ ಕಂದಾಯ ಸಚಿವ ಆರ್.ಅಶೋಕ ನೆರೆ ಹಾವಳಿ, ಕೃಷ್ಣಾ ಪ್ರವಾಹಕ್ಕೆ ನಲುಗಿದ ರೈತರಿಗೆ ಸಮರ್ಪಕ ಹಾನಿ ತುಂಬಲಾಗುವದು ಯಾರೊಬ್ಬರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ನೆರೆ ಹಾವಳಿ, ಕೃಷ್ಣಾ ಪ್ರವಾಹಕ್ಕೆ ನಲುಗಿದ ಸುರಪುರ ತಾಲೂಕಿನ ಕೃಷ್ಣಾ ನದಿಪಾತ್ರದ ಗ್ರಾಮಗಳಿಗೆ ಭೇಟಿ ಪರಿಶೀಲನೆ ನಡೆಸಿದರು.
ಬಿಜೆಪಿ ಸರ್ಕಾರ ಜನರ ಹಿತ ಬಯಸಿ ದುಡಿಯುವಂತದ್ದು, ಪ್ರವಾಹದಿಂದ ತತ್ತರಿಸಿದ ರೈತಾಪಿ ಕುಟುಂಬಗಳಿಗೆ ಸಹಾಯಧನ ನೀಡಲಾಗುವದು.
ಪ್ರಕೃತಿ ವಿಕೋಪಕ್ಕೆ ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲ ಕಲ್ಪಿಸಲಾಗುವದು ಎಂದರು. ಈ ಸಂದರ್ಭದಲ್ಲಿ ಶಾಸಕ ರಾಜೂಗೌಡ (ನರಸಿಂಹ ನಾಯಕ) ಸೇರಿದಂತೆ ಪ್ರಮುಖರು ಜೊತೆಗಿದ್ದರು.