ಪ್ರಮುಖ ಸುದ್ದಿ
ಜನಾರ್ಧನರಡ್ಡಿಗೆ ಕೊರೊನಾ ಸೋಂಕು, ತಾಯಿ ಪುಣ್ಯತಿಥಿಗಾಗಿ ಬಳ್ಳಾರಿಗೆ ಬರುವ ಆಸೆ ಭಗ್ನ.?
ಜನಾರ್ಧನರಡ್ಡಿಗೆ ಕೊರೊನಾ ಸೋಂಕು, ತಾಯಿ ಪುಣ್ಯತಿಥಿಗಾಗಿ ಬಳ್ಳಾರಿಗೆ ಬರುವ ಆಸೆ ಭಗ್ನ.?
ಬೆಂಗಳೂರಃ ಗಾಲಿ ಜನಾರ್ಧನರಡ್ಡಿ ಅವರಿಗೆ ಕೊರೊನಾ ಸೋಂಕು ತಗುಲಿರುವ ಕುರಿತು ಗೆಳೆಯ ಶ್ರೀರಾಮುಲು ಸ್ಪಷ್ಟ ಪಡಿಸಿದ್ದು, ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
ಕೂಡಲೇ ಗೆಳೆಯ ಕೊರೊನಾ ಗೆದ್ದು ಬರಲಿ ಎಂದು ಸ್ನೇಹಿತ ಶ್ರೀರಾಮುಲು ಟ್ವಿಟರ್ ಮೂಲಕ ಹಾರೈಸಿದ್ದಾರೆ.
ಹೀಗಾಗಿ ಶ್ರಿರಾಮುಲು ಅವರ ತಾಯಿ ಪುಣ್ಯತಿಥಿಗಾಗಿ ಬಳ್ಳಾರಿಗೆ ಆಗಮಿಸುವ ಅವರ ಕನಸು ಭಗ್ನವಾದಂತೆ, ನಾಳೆ ಅಂದ್ರೆ ಆ.30 ಮತ್ತು 31 ರಂದು ಎರಡು ದಿನಗಳ ಜಾಲ ಸುಪ್ರೀಂಕೋರ್ಟ್ ಅವರಿಗೆ ಬಳ್ಳಾರಿಗೆ ತೆರಳು ಅವಕಾಶ ಕಲ್ಪಿಸಿತ್ತು.
ನಾಳೆ ಆ.30 ರಂದು ಬಳ್ಳಾರಿಯಲ್ಲಿ ನಡೆಯುವ ಶ್ರಿರಾಮುಲು ಅವರ ತಾಯಿಯವರ ಪುಣ್ಯತಿಥಿ ಕಾರ್ಯಕ್ರಮಕ್ಕೆ ರಡ್ಡಿ ಆಗಮಿಸುವ ಆತುರದಲ್ಲಿದ್ದರು. ಆದರೆ ದುರಾದೃಷ್ಟ ಕೊರೊನಾ ತಗುಲಿರುವ ಕಾರಣ ನಾಳೆ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಯಾವ ಲಕ್ಷಣಗಳು ಕಾಣುತ್ತಿಲ್ಲ ಎನ್ನಬಹುದು.