ಪ್ರಮುಖ ಸುದ್ದಿ

ತಳವಾರ ಪರಿವಾರಕ್ಕೆ ಎಸ್‍ಟಿ ಪ್ರಮಾಣ ಪತ್ರ ನೀಡಲು ಆಗ್ರಹ

ತಳವಾರ ಪರಿವಾರಕ್ಕೆ ಎಸ್‍ಟಿ ಪ್ರಮಾಣ ಪತ್ರ ನೀಡಲು ಆಗ್ರಹ
yadgiri, ಶಹಾಪುರಃ ತಳವಾರ ಪರಿವಾರಕ್ಕೆ ಎಸ್‍ಟಿ ಪ್ರಮಾಣ ನೀಡುವಂತೆ ಆಗ್ರಹಿಸಿ ಇಲ್ಲಿನ ತಳವಾರ, ಕೋಲಿ, ಕಬ್ಬಲಿಗ ಸಮಾಜದ ಮುಖಂಡರು ಸೋಮವಾರ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.

ಕೇಂದ್ರ ಸರ್ಕಾರ ಮಾರ್ಚ್ ತಿಂಗಳಿನಲ್ಲಿಯೇ ಕೋಲಿ, ಕಬ್ಬಲಿಗ, ತಳವಾರ ಸಮಾಜಕ್ಕೆ ಎಸ್.ಟಿ. ಪ್ರಮಾಣ ನೀಡುವಂತೆ ಕಾನೂನಿನ್ವಯ ಆದೇಶ ನೀಡಿದ್ದರೂ, ರಾಜ್ಯದಲ್ಲಿ ತಳವಾರ ಜನಾಂಗಕ್ಕೆ ಎಸ್.ಟಿ. ಪ್ರಮಾಣ ಪತ್ರ ನೀಡದೆ ಸಮುದಾಯವನ್ನು ಸೌಲಭ್ಯದಿಂದ ವಂಚಿತರನ್ನಾಗಿಸುತ್ತಿದೆ ಎಂದು ಆರೋಪಿಸಿದರು.

ತಳವಾರ ಸಮುದಾಯ ಸ್ವಾತಂತ್ರ್ಯ ಪೂರ್ವದಿಂದಲೂ ತೀರ ಹಿಂದುಳಿದಿದ್ದು, ದಿಉವರೆಗೂ ಯಾವುದೇ ಸಮರ್ಪಕ ಸರ್ಕಾರಿ ಸಔಲಭ್ಯ ದೊರಕದ ಕಾರಣ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ತಳವಾರ ಸಮುದಾಯಕ್ಕೆ ಈ ಮೊದಲಿನಿಂದಲೇ ಎಸ್.ಟಿ. ಮೀಸಲಾತಿಯಡಿ ಸೌಲಭ್ಯ ಕಲ್ಪಿಸಬೇಕಿತ್ತು. ಕಾನೂನಿ ಜ್ಞಾನ ಇರದ ಕಾರಣ ಕಳೆದ 75 ವರ್ಷದಿಂದ ನಮ್ಮ ಸಮುದಾಯ ಸರ್ಕಾರಿ ಮೀಸಲಾತಿಯಿಂದ ವಂಚಿತಗೊಂಡಂತಾಗಿದೆ.

ಈಗಲಾದರೂ ಸರ್ಕಾರ ತಳವಾರ ಸಮುದಾಯಕ್ಕೆ ಸಮರ್ಪಕ ಮೀಸಲಾತಿ ವ್ಯವಸ್ಥೆಯಡಿ ಪರಿಶಿಷ್ಟ ಜಾತಿಯಡಿ ಪ್ರಮಾಣ ಪತ್ರ ನೀಡಿ ಅದರಡಿ ಬರುವ ಸೌಲಭ್ಯ ಕಲ್ಪಿಸಬೇಕು. ತಳವಾರ ಸಮುದಾಯದಲ್ಲಿ ಶೈಕ್ಷಣಿಕವಾಗಿ ತೀರ ಹಿಂದುಳಿದಿದ್ದು, ನಾವು ಈ ದೇಶದ ನಾಗರಿಕರು, ಸಂವಿಧಾನ ಬದ್ಧವಾಗಿ ನಮ್ಮ ಹಕ್ಕು ಕೇಳುವ ಅಧಿಕಾರಿ ನಮಗಿದೆ. ಸರ್ಕಾರ ಈ ಕೂಡಲೇ ನ್ಯಾಯ ಒದಗಿಸಿಕೊಡಬೇಕೆಂದು ಸಮುದಾಯದ ಪ್ರಮುಖರು ಆಗ್ರಹಿಸಿದರು. ಸರ್ಕಾರ ಈ ಮನವಿ ಪರಿಗಣಿಸದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕೋಲಿ ಸಮಾಜದ ಗೌರವಧ್ಯಕ್ಷ ರಾಮಣ್ಣ ನಾಯ್ಕೋಡಿ, ಅಧ್ಯಕ್ಷ ಅಯ್ಯಣ್ಣ ಕನ್ಯಾಕೋಳೂರ, ಮುಖಂಡರಾದ ಭೀಮರಾಯ ಮಮದಾಪುರ, ರವೀಂದ್ರನಾಥ ನರಸನಾಯಕ, ದೊಡ್ಡಮಾನಯ್ಯ ಹಾದಿಮನಿ, ಸಣ್ಣ ನಿಂಗಣ್ಣ ನಾಯ್ಕೋಡಿ, ರಾಯಪ್ಪ ಸಾಲಿಮನಿ, ಮಲ್ಲರಡ್ಡಿ ವಿಭೂತಿಹಳ್ಳಿ, ಮೌನೇಶ ಸುರಪುರಕರ್, ಸಚಿನ್ ನಾಶಿ, ವೆಂಕಟೇಶ ಬೋನೇರ, ಬಸವರಾಜ ಚಂಡು ಸೇರಿದಂತೆ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button