ಪ್ರಮುಖ ಸುದ್ದಿ
ಮುಖರ್ಜಿಯವರ ಅಗಲಿಕೆ ತುಂಬಾ ನೋವು ತಂದಿದೆಃ ನಾಡೋಜ ಡಾ.ಮಹೇಶ ಜೋಷಿ ಕಂಬನಿ
ಮುಖರ್ಜಿಯವರ ಅಗಲಿಕೆ ತುಂಬಾ ನೋವು ತಂದಿದೆಃ ನಾಡೋಜ ಡಾ.ಮಹೇಶ ಜೋಷಿ ಕಂಬನಿ
ವಿವಿ ಡೆಸ್ಕ್ಃ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಗಲಿಕೆಯಿಂದ ವಯಕ್ತಿಕವಾಗಿ ತುಂಬಾ ನೋವು, ತುಂಬಲಾರದ ನಷ್ಟ ತಂದಿದೆ ಎಂದು ನಾಡೋಜ ಡಾ.ಮಹೇಶ ಜೋಷಿ ವಿನಯವಾಣಿ ಗೆ ತಿಳಿಸಿದ್ದಾರೆ.
ದೆಹಲಿಯ ದೂರದರ್ಶನದ ಮುಖ್ಯಸ್ಥರಾಗಿದ್ದ ಸಮಯದಲ್ಲಿ (೨೦೧೩-೨೦೧೭) ಗೌರವಾನ್ವಿತ ರಾಷ್ಟ್ರಪತಿಗಳಾಗಿದ್ದ ಶ್ರೀ ಪ್ರಣಬ್ ಮುಖರ್ಜಿ ಅವರ ಒಡನಾಟ ಎಷ್ಟಿತ್ತೆಂದರೆ, ಎಲ್ಲೆ ನನ್ನನ್ನು ನೋಡಿದರೂ, “ನಾಡೋಜಾ ಜೀ ಆಯಿಯೇ” ಎಂದು ಅತಿ ಪ್ರೀತಿಯಿಂದ ಆಹ್ವಾನಿಸಿ ಮಾತನಾಡಿಸುತ್ತಿದ್ದರು ಎಂದು ಕಂಬನಿ ಮಿಡಿದರು.
ಮುಖರ್ಜಿಯವರಿಗೆ ಗೌರವ ಸೂಚಿಸಿ ಅವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.