ಪೊಂಗಾಂಗ್ ಶಿಖರ ಭಾರತೀಯ ಸೇನಾ ವಶಕ್ಕೆ!?
ದೆಹಲಿ: ಭಾರತ ಮತ್ತು ಚೀನಾ ಗಡಿಯಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ಮೂಡಿದೆ. ಮೂರು ತಿಂಗಳ ಹಿಂದಿನ ಸ್ಥಿತಿಯನ್ನು ಮೀರುವ ಸಾಧ್ಯತೆ ಹೆಚ್ಚಿದೆ. ಪೂರ್ವ ಲಡಾಕ್ ಬಳಿ ಮತ್ತೆ ಗಡಿ ವಿವಾದ ತಾರಕಕ್ಕೇರುವ ಸ್ಥಿತಿ ನಿರ್ಮಾಣವಾಗಿದೆ. ಪೊಂಗಾಂಗ್ ಸರೋವರದ ದಕ್ಷಿಣ ಭಾಗದ ಶಿಖರಗಳಲ್ಲಿ ಚೀನಾ ದೇಶ ಅಳವಡಿಸಿದ್ದ ಕ್ಯಾಮೆರಾ ಮತ್ತು ಸೆನ್ಸಾರ್ಗಳ ದಿಕ್ಕು ತಪ್ಪಿಸಿ ಭಾರತದ ಯೋಧರು ಶಿಖರಗಳನ್ನೇರಿ ಮಹತ್ವದ ಘಟ್ಟಗಳಲ್ಲಿ ಸೇರಿಕೊಂಡಿದ್ದಾರೆ. ಅಲ್ಲದೆ ಕ್ಯಾಮರಾಗಳನ್ನು ಕಿತ್ತೆಸೆದಿದೆ ಎಂದು ತಿಳಿದು ಬಂದಿದೆ. ಈ ಅನಿರೀಕ್ಷಿತ ಬೆಳವಣಿಗೆ, ಭಾರತೀಯ ಸೇನೆಯ ವೇಗ ಕಂಡು ಚೀನಾ ದೇಶ ದಂಗಾಗಿದೆ.
ಭಾರತದ ಕ್ರಮ ಸರಿಯಾದುದು ಅಲ್ಲ ಈ ಪ್ರದೇಶ ತನಗೆ ಸೇರಿದ್ದು ಎಂದು ಚೀನಾ ಆರ್ಭಟಿಸುತ್ತಿದೆ. ಪಾಂಗಾಂಗ್ ದಕ್ಷಿಣದ ಎತ್ತರದ ಶಿಖರಗಳಲ್ಲಿ ಸರ್ವೆಲೆನ್ಸ್ ಕ್ಯಾಮೆರಾ ಅಳವಡಿಸಿದ್ದ ಚೀನಾ ದೇಶ ಭಾರತೀಯ ಸೇನೆಯ ಚಲನವಲನಗಳ ಮೇಲೆ ನೀಗಾ ಇರಿಸಿತ್ತು.
ಭಾರತ ಸೇನೆಯ ಪರಾಕ್ರಮದಿಂದಾಗಿ ಚೀನಾಕ್ಕೆ ಭಾರೀ ಮಖಭಂಗವಾದಂತಾಗಿದೆ. ಆದರೆ, ಭಾರತ ಸೇನೆ ತಕ್ಷಣ ಹಿಂದಕ್ಕೆ ಸರಿಯಬೇಕು ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ವಕ್ತಾರೆ ವ್ಹಾ ಚುನ್ಯಿಂಗ್ ಆಗ್ರಹಿಸಿದ್ದಾರೆ. ಭಾರತ ಯಾವ ರೀತಿ ಉತ್ತರ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.