ಪ್ರಮುಖ ಸುದ್ದಿ
ಭಾರತದ ಭವಿಷ್ಯ ಅಪಾಯಕ್ಕೆ ದೂಡುತ್ತಿರುವ ಮೋದಿ : ರಾಹುಲ್ ಕಿಡಿ
ಮೋದಿ ದುರಾಡಳಿತದ ಫಲವಾಗಿ ಭಾರತ ದುರಂತಗಳ ಸರಮಾಲೆಗೆ ಸಿಕ್ಕು ಒದ್ದಾಡುತ್ತಿದೆ. ಭಾರತದ ಜಿಡಿಪಿ (23.9%) ಐತಿಹಾಸಿಕ ಕುಸಿತ ಕಂಡಿದೆ ಎಂದು ರಾಹುಲ್ ಗಾಂಧಿ ಕಿಡಿ ಕಾರಿದ್ದು ಸರಣಿ ಟ್ವೀಟ್ ಮಾಡಿದ್ದಾರೆ.
ನಿರುದ್ಯೋಗ ನಿರ್ಮೂಲನೆಯ ಭರವಸೆ ನೀಡಿದ್ದ ಮೋದಿ ಕಳೆದ 45 ವರ್ಷಗಳಲ್ಲಿ ಭಾರತ ಎದುರಿಸಿರದಷ್ಟು ನಿರುದ್ಯೋಗ ಸಮಸ್ಯೆ ಸೃಷ್ಟಿಸಿದ್ದಾರೆ.
ಕಳೆದ ಒಂದು ವರ್ಷದಲ್ಲಿ 12 ಕೋಟಿ ಜನ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಕೆಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ನೀಡಬೇಕಿದ್ದ ಜಿಎಸ್ಟಿ ಹಣ ಬಾಕಿ ಉಳಿಸಿ ಕೊಂಡಿದ್ದು ಮಹಾಪರಾಧವಾಗಿದೆ. ಕೋವಿಡ್ -19 ಪಿಡುಗನ್ನು ನಿಯಂತ್ರಿಸುವಲ್ಲಿಯೂ ನರೇಂದ್ರ ಮೋದಿ ಸರ್ಕಾರ ಸಂರ್ಪೂಣವಾಗಿ ವಿಫಲವಾಗಿದೆ. ಸೋಂಕು ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಗಡಿ ಭಾಗಗಳಲ್ಲಿ ಅತಿಕ್ರಮಣ ಮಂದುವರಿದಿದ್ದು “ಮೋದಿ ಸರ್ಕಾರ ಭಾರತದ ಭವಿಷ್ಯವನ್ನು ಅಪಾಯಕ್ಕೆ ದೂಡುತ್ತಿದೆ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.