ಕೋವಿಡ್ ಮುಕ್ತದತ್ತ ಚೀನಾಃ ಅಧ್ಯಕ್ಷ ಜಿನ್ಪಿಂಗ್.!
ಕೋವಿಡ್ ಮುಕ್ತದತ್ತ ಚೀನಾಃ ಅಧ್ಯಕ್ಷ ಜಿನ್ಪಿಂಗ್.!
ವಿವಿ ಡೆಸ್ಕ್ಃ ಕೋವಿಡ್ – 19 ಮುಕ್ತದತ್ತ ಚೀನಾ ಹೆಜ್ಜೆ ಹಾಕ್ತಿದಿಯಂತೆ ಈ ಕುರಿತು ಅಲ್ಲಿನ ಅಧ್ಯಕ್ಷ ಜಿನ್ ಪಿಂಗ್ ಹೇಳಿಕೆ ನೀಡಿರುವದು ಹಲವಾರು ನೆಟ್ಟಿಗರ ತಲೆ ಗರಂ ಆಗಿಸಿದೆ.
ಚೀನಾದ ಅಧ್ಯಕ್ಷ ಹೇಳಿಕೆ ಕುರಿತು ಅಲ್ಲಿನ ಮಾಧ್ಯಮ ಚೀನಾ ಕೋವಿಡ್ ಮುಕ್ತ ವಾಗ್ತಿದೆ. ಕೋವಿಡ್ ಸಾಂಕ್ರಮಿಕ ರೋಗ ತಡೆಯುವಲ್ಲಿ ಚೀನಾ ಶ್ರಮಕ್ಕೆ ಫಲ ದೊರೆತಿದೆಯಂತೆ.
ಅಲ್ಲದೆ ವಿಶ್ವದಾದ್ಯಂತ ಲಕ್ಷಾಂತರ ಜೀವಗಳ ರಕ್ಷಣೆಗೂ ಅದು ಸಹಕರಿಸುವ ಕ್ರಮಕೈಗೊಂಡಿದೆಯಂತೆ, ಪಾರದರ್ಶಕವಾಗಿ ಅದು ಕೋವಿಡ್ ತಡೆಗೆ ಶ್ರಮಿಸಿದೆ ಎಂದು ಅಲ್ಲಿನ ಅಧ್ಯಕ್ಷ ಹೇಳಿರುವ ಕುರಿತು ಉಲ್ಲೇಖಿಸಿದೆ.
ಈ ಕುರಿತು ಭಾರತೀಯರು ಸೇರಿದಂತೆ ಹಲವರು ನೆಟ್ಟಿಗರು ಬದುಕಿಸುವವರು ನೀವೆ ಸಾಯಿಸುವವರು ನೀವೇ..ವ್ಹಾ ಕ್ಯಾ ಬಾತ್ ಹೈ ಎಂದು ಅನೇಕ ಇಂತಹ ಛಾಟಿ ಏಟು ನೀಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ಕೋವಿಡ್ ವೈರಸ್ ಸೃಷ್ಟಿಗೆ ಕಾರಣವಾಗಿ ಲಕ್ಷಾಂತರ ಜನ ಸಾವಿಗೆ ಕಾರಣವಾದ ಚೀನಾ ಬಾಯಲ್ಲಿ ಇಂತಹ ಹೇಳಿಕೆ ಬಂದಿರುವದು ಭೂತದ ಬಾಯಲ್ಲಿ ಭಗವದ್ಗೀತೆ ಪಠಣವಾಗಿದೆ ಎಂದರೆ ತಪ್ಪಿಲ್ಲ.