ಪ್ರಮುಖ ಸುದ್ದಿ

ನಮ್ಮ‌ ಯೋಧರು ಚೀನಾ ಸೇನೆಗೆ ತಕ್ಕ ಉತ್ತರ ನೀಡಿದೆ- ರಾಜನಾಥ ಸಿಂಗ್

ನಮ್ಮ‌ ಯೋಧರು ಚೀನಾ ಸೇನೆಗೆ ತಕ್ಕ ಉತ್ತರ ಕೊಟ್ಟಿದೆ- ರಾಜನಾಥ ಸಿಂಗ್

ನವದೆಹಲಿಃ ಚೀನಾ ನಡೆಯನ್ನು ಸಹಿಸಕ್ಕಾಗಲ್ಲ. ಗಡಿಯಲ್ಲಿ ಚೀನಾ ನಡೆಸುತ್ತಿದ್ದ ಉಪಟಳಕ್ಕೆ ನಮ್ಮ ಯೋಧರು ತಕ್ಕ ಉತ್ತರ ನೀಡಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದರು.

ಲೊಕಸಭೆ ಮಾತನಾಡಿದ ಅವರು,‌ ಚೀನಾ‌ ಮತ್ತು ನಮ್ಮ ನಡುವೆ ಗಡಿಯಲ್ಲಿ ವಾಗ್ವಾದ ನಡೆದಿದೆ. ಚೀನಾ ನಡೆಗೆ ನಮ್ಮ ಯೋಧರು ತಕ್ಕ ಉತ್ತರ ನೀಡಿದ್ದು,‌ ಸಮಪರ್ಕವಾಗಿ ಎದುರಿಸಲಾಗುತ್ತಿದೆ.

ಗಡಿ ರೇಖೆ ಕುರಿತು ಮಾತುಕತೆ ಒಪ್ಪಂದವನ್ನು ಮೀರಿ ಚೀನಾ ನಡೆ ಪ್ರದರ್ಶಿಸುತ್ತಿದ್ದು, ಅದಕ್ಕೆ ತಕ್ಕ ಉತ್ತರವನ್ನು ನಮ್ಮ ಯೋಧರು ನೀಡಿದ್ದು, ಎರಡು ದೇಶದ ಮಾತುಕತೆ ಒಪ್ಪಂದದಂತೆ ನಡೆದುಕೊಳ್ಳುವದು ನಿಯಮ.‌

ಆದರೆ‌ ಚೀನಾ‌ ನಿಯಮ‌ ಮೀರಿ ವರ್ತಿಸುತ್ತಿದ್ದು, ಅದಕ್ಕೆ ತಕ್ಕ‌ಪಾಠವನ್ನು ನಾವು ಕಲಿಸಲಾಗಿದೆ. ಶಾಂತಿ ಸ್ಥಾಪನೆಗೆ ನಾವು ಸಿದ್ಧರಿದ್ದೇವೆ. ಆದರೆ ಗಡಿ ರೇಖೆ ಕುರಿತು ರಾಜಿ ಸಂಧಾನಕ್ಕೆ ನಾವು ಸಿದ್ಧರಿಲ್ಲ. ಎಂತಹದ್ದೆ ಪರಿಸ್ಥಿತಿ ಎರಗಿದರೂ ಅದನ್ನು ಸಮರ್ಥವಾಗಿ ಎದುರಿಸಲಿದ್ದೇವೆ‌ ಎಂದು ಸಚಿವ‌ ರಾಜನಾಥ ಸಿಂಗ್ ಮಾಹಿತಿ‌ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button