ಗೋನಾಲ ದುರ್ಗಾದೇವಿ ದರ್ಶನ ಪಡೆದ ಶ್ರೀರಾಮುಲು, ದೇವಿ ಮುಂದಿಟ್ಟ ರಹಸ್ಯ ಬೇಡಿಕೆ ಏನು.?
ಗೋನಾಲ ದುರ್ಗಾದೇವಿ ದರ್ಶನ ಪಡೆದ ಶ್ರೀರಾಮುಲು, ದೇವಿ ಮುಂದೆ ಇಟ್ಟ ಬೇಡಿಕೆ ಏನು ಗೊತ್ತಾ.?
ಯಾದಗಿರಿಃ ಆರೋಗ್ಯ ಸಚಿವ ಶ್ರೀರಾಮುಲು ಬುಧವಾರ ಜಿಲ್ಲೆಯ ವಡಿಗೇರಿ ತಾಲೂಕಿನ ಗೋನಾಲ ಗ್ರಾಮದ ದುರ್ಗಾದೇವಿ ದೇಗುಲಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ಹಿಂದೆ ಇದೇ ದುರ್ಗಾದೇವಿಯ ದರ್ಶನ ಪಡೆಯಲು ಕಾಂಗ್ರೆಸ್ ನ ಡಿಕೆ ಶಿವಕುಮಾರ ಬಂದಿದ್ದರು. ಅಲ್ಲದೆ ಅವರು ಸಿಬಿಐ ದಾಳಿಯಿಂದ ತತ್ತರಿಸಿ ಜೈಲಲ್ಲಿಯೂ ಇದ್ದಾಗ ದುರ್ಗಾದೇವಿ ಪೂಜಾರಿ ಅವರಿಂದ ಸಮಸ್ಯೆ ಪರಿಹಾರಕ್ಕೆ ಅವರ ಮನೆಯಲ್ಲಿಯೇ ಪೂಜೆ ಮಾಡಿಸಿದ್ದರು.
ತದ ನಂತರ ಅವರು ಇದೇ ಗೋನಾಲಕ್ಕೆ ಆಗಮಿಸಿ ಶ್ರೀದೇವಿ ದರ್ಶನಪಡೆದು ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಏರಿದ್ದಾರೆ ಎಂಬ ವಿಷಯ ಮನೆ ಮಾತಾಗಿದೆ. ಅದರಂತೆ ಇದೀಗ ಆರೋಗ್ಯ ಸಚಿವರು ದುರ್ಗಾದೇವಿ ದರ್ಶನಕ್ಕೆ ಆಗಮಿಸಿದ್ದು,ರಾಜಕೀಯದಲ್ಲಿ ಉನ್ನತಮಟ್ಟಕ್ಕೆ ಏರಲು ಪ್ರಾರ್ಥನೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಉಪ ಮುಖ್ಯಮಂತ್ರಿ ಕರ್ನಾಟಕ ಸರ್ಕಾರ ಎಂದು ಚೀಟಿ ಬರೆದು ದೇವಿ ಮುಂದೆ ಇಟ್ಟು ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಬಹುಷ ಮುಂದಿನ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಶ್ರೀರಾಮುಲು ಅವರು ರಹಸ್ಯವಾಗಿ ಸಿಎಂ ಸ್ಥಾನದ ಬೇಡಿಕೆ ಸಲ್ಲಿಸಿದ್ದಾರೆಯೇ ಎಂಬುದು ಚರ್ಚೆಯ ಮುನ್ನೆಲೆಗೆ ಬಂದಿದೆ. ಶ್ರೀದೇವಿ ಅದೆಷ್ಟರ ಮಟ್ಟಿಗೆ ಅವರ ಬೇಡಿಕೆ ಈಡೇರಿಸುವಳು ಕಾದು ನೋಡಬೇಕು.