ಪ್ರಮುಖ ಸುದ್ದಿ
ಆಕಸ್ಮಿಕ ಬೆಂಕಿ, ಉಪಕರಣಗಳು ಭಸ್ಮಃ ಅಪಾರ ಹಾನಿ
ಆಕಸ್ಮಿಕ ಬೆಂಕಿ, ಉಪಕರಣಗಳು ಭಸ್ಮಃ ಅಪಾರ ಹಾನಿ
ಯಾದಗಿರಿಃ ಜಿಲ್ಲೆಯ ಶಹಾಪುರ ನಗರದ ಗ್ಯಾರೇಜ್ ಲೈನ್ ನಲ್ಲಿರುವ ಗುತ್ತೇದಾರ ವೆಹಿಕಲ್ ಇನ್ಸೂರೆನ್ಸ್ ಸೆಂಟರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿರುವ ಪರಿಣಾಮ ಅಪಾರ ಪ್ರಮಾಣದ ಉಪಕರಣಗಳು ಸುಟ್ಟು ಕರಕಲಾದ ಘಟನೆ ರಾತ್ರಿ ನಡೆದಿದೆ.
ಎರಡು ಕಂಪ್ಯೂಟರ್ ಗಳು, ಎರಡು ಲ್ಯಾಪ್ ಟಾಪ್, ಒಂದು ಝರೆಕ್ಸ್ ಮಷಿನ್, ಮೂರು ತಂಬ್ ಹೊತ್ತುವ ಉಪಕರಣ, ಏರ್ ಕೂಲರ್ ಸೇರಿದಂತೆ ವೈಫೈ ಇತ್ಯಾದಿ ಉಪಕರಣಗಳು ಸುಟ್ಟು ಕರಕಲಾಗಿವೆ ನಾಲ್ಕು ಲಕ್ಷ ನಷ್ಟ ಅಂದಾಜಿಸಲಾಗಿದೆ ಎಂದು ಮಾಲೀಕ ಚಂದ್ರು ಗುತ್ತೇದಾರ ವಿನಯವಾಣಿಗೆ ತಿಳಿಸಿದ್ದಾರೆ.