ಪ್ರಮುಖ ಸುದ್ದಿ
ರಾಜ್ಯಸಭೆ ಸದಸ್ಯ ಅಶೋಕ ಗಸ್ತಿ ನಿಧನ ಸುದ್ದಿ ಸುಳ್ಳು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ- ಕೃಷ್ಣಾ ಗದಗ
ರಾಜ್ಯಸಭೆ ಸದಸ್ಯ ಅಶೋಕ ಗಸ್ತಿ ನಿಧನ ಸುದ್ದಿ ಸುಳ್ಳು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ- ಕೃಷ್ಣಾ ಗದಗ
ಗದಗಃ ಸವಿತಾ ಸಮಾಜದ ರತ್ನ, ಬಿಜೆಪಿ ರಾಜ್ಯಸಭೆ ಸದಸ್ಯ ಅಶೋಕ ಗಸ್ತಿ ಅವರು ನಿಧನ ಹೊಂದಿದ್ದಾರೆ ಎಂಬ ಸುದ್ದಿ ಹರಡಿದ್ದು, ಶುದ್ಧ ಸುಳ್ಳು ಅವರಿನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸವಿತಾ ಸಮಾಜದ ಗದಗ ಜಿಲ್ಲಾ ಅಧ್ಯಕ್ಷ ಕೃಷ್ಣಾ ಹಡಪದ ವಿನಯವಾಣಿಗೆ ತಿಳಿಸಿದ್ದಾರೆ.
ಎಲ್ಲಾ ಸಾಮಾಜಿಕ ಜಾಲತಾಣ ಹಾಗೂ ಟಿವಿ ಮಾಧ್ಯಮಗಳಲ್ಲಿ ಅಶೋಕ ಹಸ್ತಿ ವಿಧಿವಶ ಎಂದು ಸುದ್ದಿ ಬರುತ್ತಿದೆ. ಇದು ಸುಳ್ಳು, ಮಾಧ್ಯಮದವರು, ಇಂತಹ ಬ್ರೆಕಿಂಗ್ ಸುದ್ದಿ ನೀಡುವ ಅವಸರದಲ್ಲಿ ಹೀಗೆ ಮಾಡಿದ್ದಾರೆ. ಇದರಿಂದ ಸವಿತಾ ಸಮಾಜ ವಿಷಾಧ ವ್ಯಕ್ತಪಡಿಸುತ್ತದೆ.
ಗಸ್ತಿ ಅವರೂ ವೆಂಟಿಲೇಟರ್ ಮೇಲಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಗಸ್ತಿ ಅವರ ಧರ್ಮಪತ್ನಿ ಅವರಿಂದಲೇ ಖುದ್ದಾಗಿ ನಮ್ಮ ಸಮಾಜದ ಕಾರ್ಯಧ್ಯಕ್ಷ ಬೈಲಪ್ಪ ಅವರು ಮಾತನಾಡಿ ಸ್ಪಷ್ಟ ಪಡಿಸಿದ್ದಾರೆ ಎಂದು ಅವರು ಹೇಳಿಕೆ ನೀಡಿದ್ದಾರೆ.