ಪ್ರಮುಖ ಸುದ್ದಿ
ರೈತ ವಿರೋಧಿ ಮಸೂದೆ ವಾಪಾಸ್ ಪಡೆಯುವವರೆಗೂ ಹೋರಾಟ ನಿಲ್ಲದು – ಟಿ.ಎ.ನಾರಾಯಣಗೌಡ
ರೈತ ವಿರೋಧಿ ಮಸೂದೆ ವಾಪಾಸ್ ಪಡೆಯುವವರೆಗೂ ಹೋರಾಟ ನಿಲ್ಲದು – ಟಿ.ಎ.ನಾರಾಯಣಗೌಡ
ಬೆಂಗಳೂರಃ ಬೆಳ್ಳಂಬೆಳಗ್ಗೆನೇ ಕರವೇ ಅಧ್ಯಕ್ಷ ನಾರಾಯನಗೌಡ ನೇತೃತ್ವದಲ್ಲಿ ಇಲ್ಲಿನ ಮೆಜೆಸ್ಟಿಕ್ ಪ್ರದೇಶ ಹೋರಾಟದ ಬಿಸಿ ತಟ್ಟಿದೆ.
ರೈತ ವಿರೋಧಿ ಮಸೂದೆಗಳನ್ನು ಕೂಡಲೆ ವಾಪಸ್ ಪಡೆಯಬೇಕೆಂದು ರಾಜ್ಯದಾದ್ಯಂತ ರೈತ ಪರ ಸಂಘಟನೆಗಳು ಕರೆ ಕೊಟ್ಟ ರಾಜ್ಯ ಬಂದ್ ಗೆ ಬೆಂಬಲಿಸಿ ಕರವೇ ಕಾರ್ಯಕರ್ತರು ರಸ್ತೆಗಿಳಿದು ಬೃಹತ್ ಪ್ರತಿಭಟನೆ ನಡೆಸುತಿದ್ದು, ಸಾರ್ವಜನಿಕರಿಗೆ ಮುಂಜಾನೆಯೇ ಬಿಸಿ ತಟ್ಟಿದೆ.
ಬಂದ್ ಹಿನ್ನೆಲೆ ಎಲ್ಲಡೆ ಪೊಲೀಸ್ ಸರ್ಪಗಾವಲು ಹಾಕಿದ್ದು, ಕೆಲ ಕ್ಷಣ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದವು ನಡೆಯಿತು.