ಮಾಜಿ ಸಚಿವ ರೇವುನಾಯಕ ಕಣ್ಣೀರು ಹಾಕಿ ಹೇಳಿದ್ದೇನು.? ಯಾಕೆ.?
ಮಾಜಿ ಸಚಿವ ರೇವುನಾಯಕ ಕಣ್ಣೀರು ಹಾಕಿ ಹೇಳಿದ್ದೇನು.? ಯಾಕೆ.?
ಕಲಬುರ್ಗಿಃ ಕೊರೊನಾ ಯಾರಿಗೂ ಬರೋದು ಬೇಡ. ಕೊರೊನಾದಿಂದ ನಾನು ಅನುಭವಿಸುತ್ತಿರುವದೇ ಸಾಕು. ದಯವಿಟ್ಟು ಯಾರು ನನ್ನ ಕಾಣಲು ಮನೆ ಹತ್ರ ಬರಬ್ಯಾಡ್ರಿ ಎಷ್ಟೇ ಹೇಳಿದ್ರೂ ಜನ ಕೇಳುತ್ತಿಲ್ಲ ದುವಿಟ್ಟು ಬರಬ್ಯಾಡ್ರಿ ಕೊರೊನಾ ಬರಲಾರದಂಗ್ ನೋಡ್ಕೋರ್ರಿ ಎಂದು ಮಾಜಿ ಸಚಿವ ರೇವುನಾಯಕ ಬೆಳಮಗಿ ಕಣ್ಣೀರು ಹಾಕಿದ್ದಾರೆ.
ಮಾಜಿ ಸಚಿವ ರೇವುನಾಯಕ ಬೆಳಮಗಿ ಅಂದ್ರೆ ಅವರ ಆಜಾನುಬಾಹು ದೇಹ, ಕುಸ್ತಿ ಪಟು ಮತ್ತು ಅವರ ಜವಾರಿ ಭಾಷೆ ನೆನಪಾಗೋದು ಸಹಜ ಅಂತಹ ವ್ಯಕ್ತಿಗೆ ಕೊರೊನಾ ಸೋಂಕು ಮೆತ್ತಗೆ ಮಾಡಿದೆ. ಆ ಕಾರಣಕ್ಕೆ ಅವರು ಕಣ್ಣೀರಾಕ್ತಾ ಕೈಜೋಡಿಸಿ ಹೇಳ್ತೀನಿ ನನ್ನ ನೋಡಾಕ್ ಯಾರು ಬರಬ್ಯಾಡ್ರಿ ಭಗವಂತ ಬೇಡಿಕೊಂಡಿನಿ ನಮ್ಮ ಮನ್ಯಾಗೂ ಬೇಡಿಕೊಂಡಾರ ಯಾರಿಗೂ ಇದು ಬರಬಾರದು ಎಂದು ಮನವಿ ಮಾಡುತ್ತಿರುವ ದೃಶ್ಯ ಕಾಳಜೀಪೂರ್ವಕವಾಗಿದೆ ಎಂದರೆ ತಪ್ಪಿಲ್ಲ.
ಕೊರೊನಾ ಪಾಸಿಟಿವ್ ಆಗಿರುವ ಹಿನ್ನೆಲೆ ಅವರು ಉಸಿರಾಟ ತೊಂದರೆ ಅನುಭವಿಸುತ್ತಿದ್ದು ನಗರದ ಅವರ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಗೆ ಯಾರು ಬರಬ್ಯಾಡ್ರಿ ನಿಮ್ಮ ಆರೋಗ್ಯ ನೋಡಿಕೊಳ್ಳಿ ಎಂದು ಅವರು ಕೈಮುಗಿದು ಹೇಳುತ್ತಿರುವದು ಕೊರೊನಾ ಆರ್ಭಟ ಎಷ್ಟಿದೆ ಎಂಬುದನ್ನು ಸಾಕ್ಷಿ ಕರಿಸುತ್ತದೆ. ದೇವರು ಅವರನ್ನು ಬೇಗ ಗುಣಮುಖ ಮಾಡಲಿ ಎಂದು ವಿನಯವಾಣಿ ಸಹ ಆಶಿಸುತ್ತದೆ.