ಪ್ರಮುಖ ಸುದ್ದಿ
ಅ.5 ರಂದು ಜೆಸ್ಕಾಂ ನೌಕರರಿಂದ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ
ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ಅ.5 ರಂದು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ
yadgiri, ಶಹಾಪುರಃ ವಿದ್ಯುತ್ ಕ್ಷೇತ್ರವನ್ನು ಕೇಂದ್ರ ಸರ್ಕಾರ ಖಾಸಗೀಕರಣಗೊಳಿಸುತ್ತಿರುವದನ್ನು ವಿರೋಧಿಸಿ ಕೆಪಿಟಿಸಿಎಲ್ ನೌಕರರ ಸಂಘ ಕೇಂದ್ರ ಸಮಿತಿ ರಾಜ್ಯದಾದ್ಯಂತ ಅಕ್ಟೋಬರ್ 5 ರಂದು ಕೆಪಿಟಿಸಿಎಲ್ ನೌಕರರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಲು ಕರೆ ನೀಡಿರುವ ಹಿನ್ನೆಲೆ ನಗರದ ಜೆಸ್ಕಾಂ ಕಚೇರಿಯಲ್ಲಿ ಅ.5 ರಂದು ನೌಕರರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ತಾಲೂಕು ಕೆಪಿಟಿಸಿಎಲ್ ನೌಕರರ ಸಂಘದ ಕಾರ್ಯದರ್ಶಿ ಎಕ್ಬಾಲ್ ಲೋಹಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಹಾಪುರ ಉಪವಿಭಾಗ ಕಚೇರಿ ಆವರಣದಲ್ಲಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದು, ಅಂದು ಎಲ್ಲಾ ನೌಕರರ ಬಂಧುಗಳು ಭಾಗವಹಿಸಬೇಕೆಂದು ಅವರು ಕೋರಿದ್ದಾರೆ.