ಹತ್ರಾಸ್ ಪ್ರಕರಣಃ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಲು ಒತ್ತಾಯ
ಯುಪಿ ಅತ್ಯಾಚಾರ ಪ್ರಕರಣಃ ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹ
yadgiri, ಶಹಾಪುರಃ ಉತ್ತರ ಪ್ರದೇಶದ ಹತ್ರಾಸ್ ಗ್ರಾಮದಲ್ಲಿ ದಲಿತ ಯುವತಿಯೋರ್ವಳ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಯುವತಿಯ ದಲಿತ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕೆಂದು ಆಗ್ರಹಿಸಿ ಇಲ್ಲಿನ ಮಾದಿಗ ಯುವ ಸೇನೆ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿತು.
ದೇಶದಲ್ಲಿ ದಲಿತರ ಮೇಲೆ ಅತ್ಯಚಾರ, ಕೊಲೆ, ಸುಲಿಗೆ ದೌರ್ಜನ್ಯದಂತ ಘಟನೆಗಳು ಮರುಕಳಿಸುತ್ತಲೇ ಇವೆ. ಈ ಕುರಿತು ಕೇಂದ್ರ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳುಹಿಸದಂತೆ ನೋಡಿಕೊಳ್ಳಬೇಕು. ಹತ್ರಾಸ್ ಗ್ರಾಮದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಆರೋಪಿಗಳು ಎಷ್ಟೆ ಬಲಿಷ್ಠವಾಗಿದ್ದರೂ ಪಾರದರ್ಶಕ ತನಿಖೆಕೈಗೊಂಡು ಸತ್ಯಾಂಸ ಹೊರಬೀಳಬೇಕಿದೆ. ಆರೋಪಿಗಳು ಯಾರೇ ಯಾಗಿರಲಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು.
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಆರೋಪಿಗಳ ಪರವಾಗಿ ನಿಂತಿದ್ದು, ಈ ಕುರಿತು ಪರಿಶೀಲಿಸಿ ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಗುರಿ ಪಡಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ದಲಿತ ಅನ್ಯಾಯ, ಅತ್ಯಾಚಾರ, ದೌಜನ್ಯದಂತಹ ಘಟನೆಗಳು ದಿನೆ ದಿನೇ ಹೆಚ್ಚಾಗುತ್ತಿದ್ದು, ಈ ಕುರಿತು ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾದಿಗ ಯುವ ಸೇನೆ ತಾಲೂಕು ಅಧ್ಯಕ್ಷ ಹಣಮಂತ ಬೇಟೆಗಾರ, ಪ್ರಧಾನಕಾರ್ಯದರ್ಶಿ ಮಲ್ಲಿಕಾರ್ಜುನ ಬನ್ನಿಕಟ್ಟಿ ಮುಖಂಡರಾದ ಸೋಪಣ್ಣ ಸಗರ, ಮಲ್ಲಿಕಾರ್ಜುನ ಪಾಟೀಲ್, ಶಿವಶರಣ ಕಟ್ಟಿಮನಿ, ಅವಿನಾಶ ಗುತ್ತೇದಾರ, ಲಕ್ಷ್ಮಣ ಶೆಟ್ಟಿ ದೇವಿನಗರ, ಶಿವು ದೊಡ್ಮನಿ, ರಡ್ಡಿ ಸಗರಕರ್, ಅಯ್ಯಪ್ಪ ಕದರಾಪುರ, ಹೊನ್ನಪ್ಪ ನಾಟೇಕಾರ, ಅಂಬು ಗುಂಡುಗುರ್ತಿ ಸೇರಿದಂತೆ ಇತರರು ಭಾಗವಹಿಸಿದ್ದರು.