ಮೋದಿಯವರಿಂದ ಕಾತ್ಯಾಯಿನಿ ಮಂತ್ರ ಪಠಣ ಆಡಿಯೋ ವೈರಲ್
ವಿವಿ ಡೆಸ್ಕ್ಃ ನವರಾತ್ರಿ ಅಂಗವಾಗಿ 6 ನೇ ದಿನ ದೇವಿಯ ಕಾತ್ಯಾಯಿನಿ ಅವತಾರ ವೇಳೆ ಸನ್ಯಾನ್ಯ ಪ್ರಧಾನ ಮಂತ್ರಿ ಅವರ ಕಂಠ ಮಾಧುರ್ಯ ದಿಂದ ಕಾತ್ಯಾಯಿನಿ ಮಂತ್ರ ಸ್ತುತಿಸುವ ಆಡಿಯೋ ಒಂದು ಇದೀಗ ಎಲ್ಲಡೆ ವೈರಲ್ ಆಗ್ತಿದೆ..
ಪ್ರಧಾನಿ ನರೇಂದ್ರ ಮೋದಿಯವರು ದೇವಿ ಆರಾಧಕರು. ನವರಾತ್ರಿ 9 ದಿನಗಳ ಕಾಲ ನಿರಾಹಾರ ಯಾವುದೇ ಆಹಾರ ಸೇವಿಸದೆ ನಿತ್ಯ ಬಿಸಿ ನೀರು ಸೇವನೆ ಮಾಡುವ ಮೂಲಕ ದೇವಿಯ ಪರಮ ಶ್ರೇಷ್ಠ ಭಕ್ತರಾಗಿರುವದು, ಗುಜರಾತ್ ಜನರು ಅವರನ್ನು ಸಮೀಪದಿಂದ ಬಲ್ಲವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದು ಹಳೇ ವಿಚಾರ.
ಅದರಂತೆ 2014 ರಲ್ಲಿ ಪ್ರಥಮ ಪ್ರಧಾನಿಯಾಗಿ ಆಯ್ಕೆಯಾಗಿ ವಿದೇಶಕ್ಕೆ ತೆರಳಿದ್ದಾಗ ನವರಾತ್ರಿ ಉತ್ಸವ ಸಂದರ್ಭ ಆಗ ವಿದೇಶದಲ್ಲಿ ಭೋರಿ ಭೋಜನ ಕೂಟ ಸಿದ್ಧತೆ ಮಾಡಿರುವಾಗ, ಅದನ್ನು ನವರಾತ್ರಿ ನಿರಾಹಾರಿ ಎಂದು ತ್ಯೇಜಿಸುವ ಮೂಲಕ ವಿದೇಶದಲ್ಲಿ ಭಾರತದ ಸಂಪ್ರದಾಯ, ಸಂಸ್ಕಾರ ನವರಾತ್ರಿಯ ಮಹತ್ವ ಉಪವಾಸ, ನಿರಾಹಾರ ಆಚರಣೆಯ ಮಹತ್ವ ಪಸರಿಸಿದ್ದರು.
ಅದಂತೆ ಇದೀಗ ನವರಾತ್ರಿ ಅಂಗವಾಗಿ ನಿತ್ಯ ದೇವಿ ಆರಾಧನೆ ಮಾಡುವಾಗ ದೇವಿ ಅವತಾರಕ್ಕೆ ಸಂಬಂಧಿಸಿದ ಆಯಾ ದಿನ ಆಯಾ ಮಂತ್ರೋಚ್ಛಾರಣೆ ರಾಗಬದ್ಧವಾಗಿ ಸ್ತುತಿಸುವ ಮೂಲಕ ಪ್ರಧಾನಿ ನಮ್ಮ ಮನೆಯ ಮಗನೆಂಬ ಆಶಯ ಅಭಿಲಾಷೆಯನ್ನು ಹೆಚ್ಚಿಸಿದ್ದಾರೆ.
ಪ್ರಧಾನಿ ಎಂದರೆ ಕೈಗೆ ಕಣ್ಣಿಗೆ ನಿಲುಕದವರೆಂಬ ಭಾವನೆಯನ್ನು ತೊಡೆದು ಹಾಕಿ ನಮ್ಮನೆಯ ಮಗ ನಮ್ಮವರೇ ಎಂಬ ಪ್ರೀತಿ ವಿಶ್ವಾಸವನ್ನು ಮೂಡಿಸಿದ ಮೋದಿಜೀಯವರು ಭಾರತದ ಪ್ರತಿಯೊಬ್ಬರ ಮನ ಮನೆಯಲ್ಲಿ ನೆಲೆಸಿದ್ದಾರೆ ಎಂದರೆ ತಪ್ಪಾಗಲಾರದು.
ಅಲ್ಲದೆ ಬಹು ಮುಖ್ಯವಾಗಿ ನವರಾತ್ರಿ ದೇವಿ ಆರಾಧನೆಯ ಮಂತ್ರ ಸ್ತುತಿಸಿರುವ ಕಂಠ ಮಾಧುರ್ಯ ಪ್ರಧಾನಿಯವರದ್ದೋ ಇಲ್ಲವೋ ಸ್ಪಷ್ಟತೆ ಇಲ್ಲ. ಆದರೆ ಪ್ರಧಾನಿಯವರು ಮಾತ್ರ ದೇವಿ ಆರಾಧಕರು ಧಾರ್ಮಿಕ ವಾಗಿ ಅಪಾರ ನಂಬಿಕೆಯುಳ್ಳವರು ಮತ್ತು ಸಂಪ್ರದಾಯ, ಪದ್ಧತಿ ಆಚರಣೆ ಮಾಡುವವರಾಗಿದ್ದಾರೆ ಎಂಬುದು ಗೊತ್ತಿರುವ ವಿಷಯ.
ಇದೇ ವೇಳೆ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ಪಧಾನಿಯವರ ಕಂಠ ಮಾಧುರ್ಯದಲ್ಲಿ ಕಾತ್ಯಾಯಿನಿ ಮಂತ್ರ ಸ್ತುತಿಸುತ್ತಿರುವದನ್ನು ಕೇಳಿ ಎಂದು ಆಡಿಯೋ ವೈರಲ್ ಮಾಡಲಾಗಿದೆ. ಆದರೆ ಅದು ಪ್ರಧಾನಿಯವರದ್ದೇ ಕಂಠವೋ ಏನೆಂಬದು ಕುರಿತು ಮಾಧ್ಯಮಗಳು ಪತ್ತೆ ಹಚ್ಚುವ ಮೂಲಕ ಅದಕ್ಕೊಂದು ಇತಿಶ್ರೀ ಹಾಡಬೇಕಿದೆ.
ಒಂದಂತು ಸತ್ಯ ಪ್ರಧಾನಿಯವರು ದೇವಿ ಆರಾಧಕರು, ಉಪಾಸಕರು ನವರಾತ್ರಿಯನ್ನು ಶಿಸ್ತು ಬದ್ಧವಾಗಿ ವಿಧಿವಿಧಾನಗಳ ಮೂಲಕ ಭಾರತೀಯ ಸಂಸ್ಕೃತಿ ಅನುಗುಣವಾಗಿ ಆಚರಿಸುವವರಾಗಿದ್ದಾರೆ ಎನ್ನಬಹುದು.
–ಮಲ್ಲಿಕಾರ್ಜುನ ಮುದನೂರ.