ಪ್ರಮುಖ ಸುದ್ದಿ
ಜಾತಿವಾದಿಗಳನ್ನು ಅಧಿಕಾರದಿಂದ ದೂರವಿಡಿ – ಯೋಗಿ ಆದಿತ್ಯನಾಥ
ಜಾತಿವಾದಿಗಳನ್ನು ಅಧಿಕಾರದಿಂದ ದೂರವಿಡಿ – ಯೋಗಿ ಆದಿತ್ಯನಾಥ
ಬಿಹಾರಃ ಮಹಾಘಟ ಬಂಧನ್ ಹೆಸರಲ್ಲಿ ಒಂದಾದ ಪಕ್ಷಗಳು ಜಾತಿಯನ್ನು ಮುಂದು ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ. ಇಂತಹ ಜಾತಿವಾದಿಗಳನ್ನು ಮತದಾರರು ಅಧಿಕಾರದಿಂದ ದೂರವಿರಿಸಬೇಕು ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ ಕರೆ ನೀಡಿದರು.
ಬಿಹಾರ ವಿಧಾನಸಭೆ ಚುನಾವಣೆ ಅಂಗವಾಗಿ ಸಿವಾನ್ ನಲ್ಲಿ ಗುರುವಾರ ನಡೆದ ಪ್ರಚಾರಸಭೆಯಲ್ಲಿ ಮತದಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬಿಹಾರದಲ್ಲಿ 1990 ರಿಂದ 2005 ರವರೆಗೆ ಜಂಗಲ್ ರಾಜ್ ನಡೆಸಿದವರು ಯಾರು ಎಂಬುದು ಜನತೆಗೆ ಗೊತ್ತಿದೆ. ನಂತರ ನಿತೀಶಕುಮಾರ ಅವರು ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಎಂಬುದನ್ನು ಮರುಕಳಿಸಿದ್ದಾರೆ. ರಾಜ್ಯ ಹಿತ ಕಾಪಾಡುವಲ್ಲಿ ಶ್ರಮಿಸಿದ್ದಾರೆ. ಹೀಗಾಗಿ ಮತ್ತೆ ಜಂಗಲ ರಾಜ್ ಆಡಳಿತ ತರಲು ಜನರಿಗೆ ಬೇಕಿಲ್ಲ ಎಂದಿದ್ದಾರೆ.