“ನರಿಯ ನ್ಯಾಯ” ಈ ಕಥೆ ಓದಿ ಆ ಮೇಲೆ ಅಭಿಪ್ರಾಯ ತಿಳಿಸಿ
ನರಿಯ ನ್ಯಾಯ
ಬೆಟ್ಟದ ಊರಿನಿಂದ ಬಯಲಿನ ಕಡೆಗೆ ಒಬ್ಬ ಪಯಣಿಗೆ ನಡೆದು ಹೋಗುತ್ತಿದ್ದ . ಹಾದಿಯಲ್ಲಿ ಒಂದು ದೊಡ್ಡ ಕಲ್ಲು ಚಪ್ಪಡಿಯ ಕೆಳಗೆ ನಾಗರ ಹಾವೊಂದು ಬಿದ್ದು ಒದ್ದಾಡುತ್ತಿರುವುದನ್ನು ಕಂಡನು. ಕನಿಕರದಿಂದ ಕಲ್ಲನ್ನು ಪಕ್ಕಕ್ಕೆ ಜರುಗಿಸಿದ .
ವಿಪತ್ತಿನಿಂದ ಪಾರಾದ ಕೂಡಲೇ ಹಾವು“ ಈಗ ನಿನ್ನನ್ನು ಕಚ್ಚುವೆ ‘ ಎಂದಿತು . ಆತ ಗಾಬರಿಯಿಂದ, ಯಾಕೆ ಹೀಗೆನ್ನುವಿ.? ಉಪಕಾರ ಮಾಡಿದ ನನ್ನನ್ನೇ ಕಚ್ಚಿ ಘಾಸಿಗೊಳಿಸುವಿಯಾ.? ಅಲ್ಲಿ ಮೊಲ ಹೋಗ್ತಿದೆ . ಅದನ್ನೇ ಕೇಳು ಬೇಕಾದರೆ … ” ಎಂದ .ಮೊಲವೂ ತಕ್ಷಣ ಹೇಳಿತು ‘ ಹಾವು ಹೇಳಿದ್ದೇ ಸರಿ ‘ .
ಆಗ ಪಯಣಿಗ ಹೇಳಿದ – ‘ಅಲ್ಲೊಂದು ನರಿ ಬರ್ತಿದೆ, ಅದನ್ನೇ ಕೇಳೋಣ ‘ ಅದು ಸಾವಧಾನವಾಗಿ ಹೇಳಿತು – “ನೀನೇ ಆ ಕಲ್ಲು ಚಪ್ಪಡಿ ಎತ್ತಿದ್ದು ನಿಜವೇ ? ನಿನಗೆ ಅಷ್ಟು ಶಕ್ತಿ ಇರುವುದು ಹೌದೇ ? ನೋಡಬೇಕು ‘ ಎಂದಿತು .
‘ಆಗಲಿ , ಮತ್ತೆ ತೋರಿಸ್ತೀನಿ ‘ ಎಂದ ಪ್ರಯಾಣಿಕ . ಹಾವೂ ಒಪ್ಪಿ ಕೆಳಗೆ ಮಲಗಿತು . ಪಯಣಿಗ ಕಲ್ಲನ್ನು ಅದರ ಮೇಲಿಟ್ಟ , ಆಗ ನರಿ ` ನಡಿ , ಹೋಗೋಣ ಇಲ್ಲಿಂದ ‘ ಎನ್ನುತ್ತಲೇ ಆತನನ್ನು ಹೊರಡಿಸಿಕೊಂಡೇ ಓಡಿ ಬಿಟ್ಟಿತು .
ನೀತಿ – ಉಪಕಾರ ಮಾಡಿದವರಿಗೆ ಕೃತಜ್ಞತೆ ತೋರಿಸಿ. ಇಲ್ಲವಾದರೆ ಮರಳಿ ಕಷ್ಷವೇ ಬಂದೊದಗುವುದು ಖಂಡಿತ.
ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ.
📞-9341137882