ಪ್ರಮುಖ ಸುದ್ದಿ

ಮಾಜಿ ಸಚಿವ ಕುಲಕರ್ಣಿ ಬಂಧನ

ಮಾಜಿ ಸಚಿವ ಕುಲಕರ್ಣಿ ಬಂಧನ

ಧಾರವಾಡಃ ಬೆಳ್ಳಂಬೆಳಗ್ಗೆ ಸಿಬಿಐ ಪೊಲೀಸರು ಮಾಜಿ‌ ಸಚಿವ ವಿನಯ್ ಕುಲಕರ್ಣಿ ಬಂಧಿಸಿ ಠಾಣೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.

2016 ರಲ್ಲಿ ಜಿಮ್ ನಗರದ ಜಿಮ್ ವೊಂದರಲ್ಲಿ ಬಿಜೆಪಿಯ ಜಿಪಂ ಸದಸ್ಯ ಯೋಗೀಶ್ ಗೌಡ ಕೊಲೆ ನಡೆದಿತ್ತು.
ಈ ಪ್ರಕರಣದಡಿ ವಿನಯ ಕುಲಕರ್ಣಿ ಸಹೋದರ ವಿಜಯ್‌ ಕುಲಕರ್ಣಿ ಹೆಸರು ಕೇಳಿ ಬಂದಿತ್ತು. ಆ ಹಿನ್ನೆಲೆ ಆಗ ಸಚಿವಾಗಿದ್ದ ವಿನಯ ಕುಲಕರ್ಣಿ ಯವರ‌ ಬೆಂಬಲವಿತ್ತೆಂದು‌ ಹೇಳಲಾಗಿತ್ತು.‌ ಇಷ್ಟೆ ಅಲ್ಲದೆ ಆಗ ಗೃಹ ಸಚಿವರಾಗಿದ್ದ ಪರಮೇಶ್ವರ ಅವರನ್ನು ಸಹ‌ ಈ ಪ್ರಕರಣದಲ್ಲಿ ವಿಚಾರಣೆ ನಡೆಸಲಾಗಿತ್ತು ಎಂಬುದು ಸ್ಮರಿಸಬಹುದು.

ಇಷ್ಟಕ್ಕೂ ಈ ಕೇಸ್ ನಲ್ಲಿ 500 ಕ್ಕೂ ಹೆಚ್ಚು ಜನರನ್ನು ಸಂಶಯಾತ್ಮಕವಾಗಿ ಈ‌ ಪ್ರಕರಣದಲ್ಲಿ‌ ವಿಚಾರಣೆ‌ ನಡೆಸಲಾಗಿದೆ ಎನ್ನಲಾಗಿದೆ. ಸಿಬಿಐ ಈ ಪ್ರಕರಣ ಕೈಗೆತ್ತಿಕೊಂಡಿರುವ ಕಾರಣ. ಇದೀಗ ಮಾಜಿ ಸಚಿವ ವಿನಯ‌ ಕುಲಕರ್ಣಿಯವರನ್ನು ಸಹ ವಿಚಾರಣೆಗೆ ಕರೆದೊಯ್ದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

 

 

Related Articles

Leave a Reply

Your email address will not be published. Required fields are marked *

Back to top button