ಪ್ರಮುಖ ಸುದ್ದಿ
ಗಂಡನ ಕೊಲೆ ನಡೆದಾಗ ನ್ಯಾಯಕ್ಕಾಗಿ ಅಂಗಲಾಚಿದ್ದೆ ಯಾರು ಬರಲಿಲ್ಲ – ಮಲ್ಲಮ್ಮ ಯೋಗೇಶಗೌಡ
ಗಂಡನ ಕೊಲೆ ನಡೆದಾಗ ನ್ಯಾಯಕ್ಕಾಗಿ ಅಂಗಲಾಚಿದ್ದೆ ಯಾರು ಬರಲಿಲ್ಲ – ಮಲ್ಲಮ್ಮ ಯೋಗೇಶಗೌಡ
ಧಾರವಾಡಃ ನನ್ನ ಗಂಡ ಯೋಗೇಶಗೌಡನ ಕೊಲೆ ನಡೆದಾಗ ನ್ಯಾಯಕ್ಕಾಗಿ ಹೋರಾಟ ಮಾಡಲು ಅಂಗಲಾಚಿದ್ದೆ ಯಾವ ಜನಪ್ರತಿ ನಿಧಿ ಬರಲಿಲ್ಲ ಎಂದು ಯೋಗೇಶಗೌಡ ಪತ್ನಿ ಮಲ್ಲಮ್ಮ ನೊಂದು ನುಡಿದರು.
ಮಾಜಿ ಸಚಿವ ವಿನಯ್ ಕುಲಕರ್ಣಿ ಯೋಗೇಶಗೌಡ ಹತ್ಯೆ ಪ್ರಕರಣದಲ್ಲಿ ಸಿಬಿಐ ವಶಕ್ಕೆ ಪಡೆದಿರುವ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ ಪಡೆದಿರುವದು ನನಗೆ ಖುಷಿಯೂ ತಂದಿಲ್ಲ ದುಃಖವು ಎನಿಸಿಲ್ಲ ಎಂದರು.
ಆದರೆ ಗಂಡ ಯೋಗೇಶಗೌಡ ಕೊಲೆ ಕುರಿತು ನ್ಯಾಯ ದೊರಕಿಸಿ ಕೊಡಿ, ಹೋರಾಟ ಮಾಡೋಣ ಬನ್ನಿ ಎಂದು ಜಗಧೀಶ ಶೆಟ್ಟರ್ ಮತ್ತು ಪ್ರಹ್ಲಾದ್ ಜೋಷಿ ಸೇರಿದಂತೆ ಹಲವರ ಬಳಿ ಅಂಗಲಾಚಿ ಬೇಡಿಕೊಂಡೆ ಅವರ್ಯಾರು ನನಗೆ ಸ್ಪಂಧಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಆಗಿನ ಪರಿಸ್ಥಿತಿಯಲ್ಲಿ ಅಸಹಾಯಕಳಾದ ನನಗೆ ನನ್ನ ಮಕ್ಕಳನ್ನು ಹಾಸ್ಟೆಲ್ ಗೆ ಸೇರಿಸಲು ಯಾರೊಬ್ಬರು ಬರಲಿಲ್ಲ ಸಹಾಯವು ಮಾಡಲಿಲ್ಲ ಎಂದು ದುಃಖಿಸಿದರು.