ಟ್ರ್ಯಾಕ್ಟರ್ ಟ್ರ್ಯಾಲಿಗೆ ಕಾರು ಡಿಕ್ಕಿಃ ಸ್ಥಳದಲ್ಲಿಯೇ ಇಬ್ಬರ ಸಾವು
ಟ್ರ್ಯಾಕ್ಟರ್ ಟ್ರ್ಯಾಲಿಗೆ ಕಾರು ಡಿಕ್ಕಿಃ ಸ್ಥಳದಲ್ಲಿಯೇ ಇಬ್ಬರ ಸಾವು
ಶಹಾಪುರಃ ರಸ್ತೆ ಬದಿ ನಿಲ್ಲಿಸಲಾಗಿದ್ದ ಟ್ರ್ಯಾಕ್ಟರ್ ಟ್ರ್ಯಾಲಿವೊಂದಕ್ಕೆ ಕಾರುವೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಮೂವರು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ರಸ್ತಾಪುರ ಕ್ರಾಸ್ ಬಳಿ ಶುಕ್ರವಾರ ರಾತ್ರಿ ನಡೆದಿದೆ.
ಅಫೀಜಾಬೇಗಂ ಗಂಡ ಖಾಸಿಂಸಾಬ್ (62) ಮತ್ತು ಅಬೀದಾಬೇಗಂ ಗಂಡ ಅಬ್ದುಲ್ ನಬಿ(58) ಎಂಬುವರೇ ಮೃತ ದುರ್ದೈವಿಗಳಾಗಿದ್ದಾರೆ. ತಾಲೂಕಿನ ರಸ್ತಾಪುರ ಗ್ರಾಮದ ನಿವಾಸಿಗಳಾದ ಇವರು, ಶುಕ್ರವಾರ ರಾತ್ರಿ ಅಫೀಜಾ ಬೇಗಂ ಎಂಬುವರಿಗೆ ಬೈಕ್‍ವೊಂದು ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದು, ಅವರನ್ನು ಅದೇ ರಾತ್ರಿ ಶಹಾಪುರ ನಗರದ ಸರ್ಕಾರಿ ಆಸ್ಪತ್ರಗೆ ಚಿಕಿತ್ಸೆಗೆಂದು ಕಾರಿನಲ್ಲಿ ತೆರಳುತ್ತಿರುವಾಗ ಮತ್ತೆ ಈ ಅಪಘಾತ ಜರುಗಿದೆ ಎನ್ನಲಾಗಿದೆ.
ಇನ್ನೂ ಕಾರಿನಲ್ಲಿದ್ದ ಮಹ್ಮದ್ ಸರಮದ್, ಮಹ್ಮದ್ ತೋಫಿಕ್ ಮತ್ತು ಕುಲ್ಸಂಬಿ ಬೇಗಂ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಲ್ಬುರ್ಗಿಯ ಆಸ್ಪತ್ರೆಗೆ ಕಳುಹಿಸಕೊಡಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.