ಪ್ರಮುಖ ಸುದ್ದಿ
ಬಸವೇಶ್ವರ ಪ್ರತಿಮೆಗೆ ಅವಮಾನಃ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ
ಬಸವೇಶ್ವರ ಪ್ರತಿಮೆಗೆ ಅವಮಾನಃ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ
yadgiri, ಶಹಾಪುರಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿನ ಬಸವೇಶ್ವರ ಸರ್ಕಲ್ನಲ್ಲಿ ಸ್ಥಾಪಿಸಲಾಗಿದ್ದ ಕೈಯೊಂದರಲ್ಲಿ ಲಿಂಗು ಹಿಡಿದು ಕುಳಿತಿದ್ದ ಬಸವೇಶ್ವರ ಪ್ರತಿಮೆಯ ಕೈಯನ್ನು ದುಷ್ಕರ್ಮಿಗಳು ತುಂಡಾಗಿಸುವ ಮೂಲಕ ಅಪಮಾನ ಕೃತ್ಯ ಎಸಗಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಇಲ್ಲಿನ ಯಾದಗಿರಿ ಜಿಲ್ಲಾ ಲಿಂಗಾಯತ ಪಂಚಮಸಾಲಿ ಯುವ ಘಟಕದ ಜಿಲ್ಲಾ ಅಧ್ಯಕ್ಷ ಗುರುಲಿಂಗಪ್ಪ ಎಂ.ಅಂಗಡಿ ಆಗ್ರಹಿಸಿದ್ದಾರೆ.
ಸಮಾನತೆಯ ಹರಿಕಾರ ಸ್ವಸ್ಥ ಸಮಾಜ ನಿರ್ಮಾಣದ ಗುರಿಕಾರ ವಿಶ್ವಗುರು ಬಸವೇಶ್ವರರ ಪ್ರತಿಮೆಗೆ ಅಪಮಾನ ಎಸಗುವ ಮೂಲಕ ಸಾಮಾಜಿಕ ವಾತಾವರಣ ಹದಗೆಡಿಸುವ ಕೆಲಸ ಮಾಡಿದ್ದಾರೆ. ಕಾರಣ ಇಂತಹ ಹೀನ ಕೃತ್ಯ ಎಸಗಿದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಅವರು ಮನವಿ ಮಾಡಿದ್ದಾರೆ. ಆರೋಪಿಗಳನ್ನು ಗುರುತಿಸಿ ಕಾನೂನು ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಜಿಲ್ಲಾದ್ಯಂತ ಪ್ರತಿಭಟನೆ ನಡೆಸಲಾಗುವದು ಎಂದು ಅವರು ಎಚ್ಚರಿಸಿದ್ದಾರೆ.