ಪ್ರಮುಖ ಸುದ್ದಿ
ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣಾ ಮತ ಎಣಿಕೆ, ನಮೋಶಿ ಮುನ್ನಡೆ
ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣಾ ಮತ ಎಣಿಕೆ, ನಮೋಶಿ ಮುನ್ನಡೆ
ಕಲ್ಬುರ್ಗಿಃ ಈಶಾನ್ಯ ಶಿಕ್ಷಕರ ಮತ ಕ್ಷೇತ್ರ ಚುನಾವಣಾ ಮತ ಎಣಿಕೆ ಮೊದಲ ಹಂತ ಮುಗಿದಿದ್ದು, ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಮುನ್ನಡೆ ಸಾಧಿಸಿದ್ದಾರೆ.
ಗುಲ್ಬರ್ಗಾ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದಲ್ಲಿ ನಡೆಯುತ್ತಿರುವ ಮತ ಎಣಿಕೆ ಕಾರ್ಯದಲ್ಲಿ ಮೊದಲನೇ ಸುತ್ತಿನಲ್ಲಿ
ಬಿಜೆಪಿ ಅಭ್ಯರ್ಥಿ ಶಶಿಲ್ ನಮೋಶಿ 905 ಮತಗಳಿಂದ ಮುನ್ನಡೆ ಸಾಧಿಸಿದ್ದು 3136 ಮತಗಳು ಪಡೆದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ 2231 ಮತಗಳು ಪಡೆದರೆ, ಜೆಡಿಎಸ್ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ಅವರಿಗೆ 975 ಮತಗಳು ಮೊದಲ ಹಂತದ ಎಣಿಕೆಯಡಿ ಲಭ್ಯವಾಗಿವೆ.
ಇನ್ನೂ ಎರಡು ಸುತ್ತು ಮೊದಲ ಪ್ರಾಶಸ್ತ್ಯ ಮತಗಳನ್ನು ಎಣಿಸಲಾಗುತ್ತದೆ ಎನ್ನಲಾಗಿದೆ.