BREAKING-ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ರದ್ದು, ಹೊಸ ಮೀಸಲಾತಿ ಜಾರಿಗೆ ಹೈಕೋರ್ಟ್ ಸೂಚನೆ
ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ರದ್ದು, ಹೊಸ ಮೀಸಲಾತಿ ಜಾರಿಗೆ ಹೈಕೋರ್ಟ್ ಸೂಚನೆ
ವಿವಿ ಡೆಸ್ಕ್ಃ ಇತ್ತೀಚೆಗೆ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ಗೆ ಮೀಸಲಾತಿ ಪ್ರಕಟಗೊಂಡು ಹಲವಡೆ ನೂತನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಆಯ್ಕೆಯಾಗಿದ್ದಾರೆ. ಆದರೆ ಇದೀಗ ಹೈಕೋರ್ಟ್ ಈ ಮೀಸಲಾತಿ ರದ್ದುಗೊಳಿಸಿ ಹೊಸ ಮೀಸಲಾತಿ ಅಧಿಸೂಚನೆ ಪ್ರಕಟಿಸುವಂತೆ ಏಕಸದಸ್ಯ ಪೀಠ ನ್ಯಾಯಮೂರ್ತಿ ದೇವದಾಸ ಅವರು ಆದೇಶ ಮಾಡಿದ್ದಾರೆ.
ಮೀಸಲಾತಿ ಕುರಿತು ಹೈಕೋರ್ಟ್ ನಲ್ಲಿ ದೂರು ಸಲ್ಲಿಕೆಯಾಗಿತ್ತು ಎನ್ನಲಾಗಿದ್ದು, ನ್ಯಾಯಧೀಶರು ಸಮರ್ಪಕ ಪರಾಮರ್ಶಿಸಿ ಮೀಸಲಾತಿ ರದ್ದುಗೊಳಿಸಿದ್ದಾರೆ ಎನ್ನಲಾಗಿದೆ.
ಅಲ್ಲದೆ 4 ವಾರಗಳಲ್ಲಿ ಹೊಸ ಮೀಸಲಾತಿ ಪ್ರಕಟಿಸಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ಚುನಾವಣೆ ನಡೆಸಬೇಕೆಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಈ ಕುರಿತು ಈಗಾಗಲೇ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದವರ ನೇಮಕಾತಿ ಅಸಿಂಧು ಆಗಲಿದೆ. ನ್ಯಾಯಾಲಯದ ಆದೇಶದಂತೆ ಹಳೇ ಮೀಸಲಾತಿ ರದ್ದುಗೊಳಿಸಿ ಇದೀಗ ಪ್ರಸಕ್ತ ಹೊಸ ಮೀಸಲಾತಿ ಜಾರಿಗೊಳಿಸುವಂತೆ ಆದೇಶ ನೀಡಿದನ್ವಯ ಮತ್ತೊಮ್ಮೆ ಹೊಸ ಮೀಸಲಾತಿ ಅನ್ವಯ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಹೀಗಾಗಿ ಈಗಾಗಲೆ ಅದೃಷ್ಟ ಒಲಿದು ಬಂದವರಿಗೆ ಹೊಸ ಮೀಸಲಾತಿ ಪ್ರಕಟದಿಂದ ಅದೃಷ್ಟದಾಯಕವಾಗಲಿದೆಯೋ ಅಥವಾ ದುರಾದೃಷ್ಟಕ್ಕೊಳಗಾಗಲಿದ್ದಾರೋ ಕಾದು ನೋಡಬೇಕು. ಹೇಗೋ ಒಂದು ತಿಂಗಳು ಮಾತ್ರ ನೂತನ ಅಧ್ಯಕ್ಷ, ಉಪಾಧ್ಯಕ್ಷರಾದ ಹಿರಿಮೆ ಮಾತ್ರ ಉಳಿಯಲಿದೆ ಎನ್ನಬಹುದು.
ಶಹಾಪುರ, ಯಾದಗಿರಿ ಮತ್ತು ಸುರಪುರ ಸೇರಿದಂತೆ ಗುರಮಠಕಲ್ ನಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷ ರ ಆಯ್ಕೆಯಾಗಿದ್ದರು. ಸದ್ಯ ಅವರ ಸ್ಥಿತಿ ಡೋಲಾಯನಮಾನವಾಗಿದೆ. ಮತ್ತೊಮ್ಮೆ ಹೊಸ ಮೀಸಲಾತಿ ಪ್ರಕಟವಾಗುವದರಿಂದ ನೂತನ ಅಧಿಕಾರ ಪಡೆದುಕೊಂಡವರಲ್ಲಿ ದುಗುಡ ಶುರುವಾಗಿದೆ ಎನ್ನಬಹುದು.