ಕೊಲೆ ಶಂಕೆ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ
ಕೊಲೆ ಶಂಕೆ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ
YADGIRI, ಶಹಾಪುರಃ ಮಗನ ದೂರಿನ ಮೇರೆಗೆ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾದ ಘಟನೆ ನಗರದ ಹಳಿಸಗರ ವಿಭಾಗದಲ್ಲಿ ಜರುಗಿತು.
ಕಳೆದ ನ. 12 ರಂದು ಹಳಿಸಗರ ಭಾಗದ ನಿವಾಸಿ ಸಾಯಬಣ್ಣ ತಂದೆ ಭೀಮರಾಯ ಪೂಜಾರಿ (45) ಮೃತಪಟ್ಟಿದ್ದನು. ನ. 13 ರಂದು ಮೃತರ ಜಮೀನಿನಲ್ಲಿ ಶವ ಸಂಸ್ಕಾರವು ಮಾಡಲಾಗಿತ್ತು.
ಸಾವಿಗೆ ಹೃದಯಾಘಾವೆಂದು ಹೇಳಲಾಗುತಿತ್ತು. ಆದರೆ ಸಂಸ್ಕಾರ ವೇಳೆ ಮೃತನ ದೇಹದ ಹಲವಡೆ ಕೆಲವೊಂದು ಗಾಯಗಳು ಕಂಡು ಬಂದಿದ್ದವು ಎನ್ನಲಾಗಿದೆ. ಆ ವೇಳೆ ಸಂಶಯ ವ್ಯಕ್ತವಾದದ್ದು, ದಿನಕಳೆದಂತೆ ಸಹಜ ಸಾವು ಅಲ್ಲ ಇದು ಕೊಲೆ ಎಂಬ ಸಂಶಯ ಕಾಡಲಾರಂಭಿಸಿ ನ. 19ರಂದು ಮೃತನ ಮಗ ಭೀಮರಾಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾನೆ.
ದೂರಿನನ್ವಯ ಯಾದಗಿರಿ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಅವರ ಸಮ್ಮುಖದಲ್ಲಿ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಪರೀಕ್ಷಾ ವರದಿ ನಂತರವೇ ಪ್ರಕರಣದ ತಿರುವ ಪಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ. ತನಿಖೇ ಕಾರ್ಯ ಚುರುಕುಗೊಂಡಿದ್ದು, ಪೊಲೀಸರ ತನಿಖೆಯ ನಂತರವೇ ಸತ್ಯಾಸತ್ಯತೆ ಹೊರಬರಲಿದೆ.
ನಗರ ಠಾಣೆಂiÀiಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
.