ಪ್ರಮುಖ ಸುದ್ದಿ
ಬಿಜೆಪಿಗೆ ಮತ ನೀಡಿ ಭಾಗ್ಯ ನಗರ ನೋಡಿ -ಸಿಎಂ ಯೋಗಿ ಮನವಿ
ಬಿಜೆಪಿಗೆ ಮತ ನೀಡಿ ಭಾಗ್ಯ ನಗರ ನೋಡಿ -ಸಿಎಂ ಯೋಗಿ ಮನವಿ
ಹೈದ್ರಾಬಾದ್ಃ ಬಿಜೆಪಿಗೆ ಮತ ನೀಡಿ “ಭಾಗ್ಯ ನಗರ” ನೋಡಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕರೆ ನೀಡಿದರು.
ಹೌದು ಇದು ಹೈದ್ರಾಬಾದ್ ನಲ್ಲಿ ನಡೆಯುತ್ತಿರುವ ಪಾಲಿಕೆ ಚುನಾವಣೆ ಅಂಗವಾಗಿ ಪ್ರಚಾರ ಕಾರ್ಯಕೈಗೊಂಡಿರುವ ಸಿಎಂ ಯೋಗಿ ಹೈದ್ರಾಬಾದ್ ಗೆ “ಭಾಗ್ಯ ನಗರ” ಎಂದು ಹೆಸರು ಮರುನಾಮಕರಣ ಮಾಡುವ ಕುರಿತು ಮಾತನಾಡಿದ್ದಾರೆ.
ಅಲ್ಲದೆ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು ನೀಡಿದ್ದಲ್ಲಿ ಇಡಿ ಹೈದ್ರಾಬಾದ್ ಅಂದರೆ ಭಾಗ್ಯ ನಗರವಾಗಿ ಹೊಸ ರೂಪಾಂತರ ಪಡೆದು ಉನ್ನತ ಅಭಿವೃದ್ಧಿ ಹೊಂದಲಿದೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಹೈದ್ರಾಬಾದ್ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಇದೇ ಪ್ರಥಮ ಬಾರಿಗೆ ಸಂಪೂರ್ಣ ವಾಗಿ ಭಾಗವಹಿಸಿ ಗೆಲ್ಲಬೇಕೆಂಬ ಹಠಕ್ಕೆ ಬಿದ್ದಿರುವದು ಎದ್ದು ಕಾಣುತ್ತಿದೆ.