ಪ್ರಮುಖ ಸುದ್ದಿ
ರೈತರ ಹೋರಾಟದಲ್ಲಿ ಭಾಗವಹಿಸುವೆ ಎಂದು ಹೇಳಿದ್ದ ಅಣ್ಣಾ ಹಜಾರೆ ಹಿಂದೆ ಸರಿದಿದ್ದೇಕೆ.?
ರೈತರ ಹೋರಾಟದಲ್ಲಿ ಭಾಗವಹಿಸುವೆ ಎಂದು ಹೇಳಿದ್ದ ಅಣ್ಣಾ ಹಜಾರೆ ಹಿಂದೆ ಸರಿದಿದ್ದೇಕೆ.?
ವಿವಿ ಡೆಸ್ಕ್ಃ ಕೇಂದ್ರ ಸರ್ಕಾರ ಜಾರಿಗೊಳಿಸಿದ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಸುತ್ತಿರುವ ಹೋರಾಟ ಬೆಂಬಲಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಶುಕ್ರವಾರ ಘೋಷಿಸಿದ್ದರು.
ಆದರೆ ಇದೀಗ ರೈತರ ಹೋರಾಟ ತೀವ್ರತೆ ಪಡೆದರು ಹಜಾರೆ ಅವರು ಉಪವಾಸ ಸತ್ಯಾಗ್ರಾಹ ನಡೆಯಿಂದ ಹಿಂದೆ ಸರಿದರು. ಕಾರಣ ಕೇಂದ್ರದ ಕೃಷಿ ಖಾತೆ ಸಚಿವ ರಾಜ್ಯ ಸಚಿವ ಕೈಲಾಶ್ ಚೌಧರಿ ಮತ್ತು ಮಾಜಿ ಸಿಎಂ ದೇವಿಂದ್ರ ಫಡ್ನವೀಸ್ ಅವರೊಂದಿಗೆ ಚರ್ಚೆ ನಡೆಸಿದ ನಂತರ ಅಣ್ಣಾ ಹಜಾರೇ ಅವರು ತಮ್ಮ ನಿಲುವನ್ನು ಬದಲಾಯಿಸಿದರು.
ಹೀಗಾಗಿ ಅವರು ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಿಸಿ ನಡೆಸಬೇಕಿದ್ದ ಉಪವಾಸ ಸತ್ಯಾಗ್ರಹದಿಂದ ಹಿಂದೆ ಸರಿದರು ಎನ್ನಲಾಗಿದೆ.