ಪ್ರಮುಖ ಸುದ್ದಿ
ಮೆಲ್ಬರ್ನ್ಃ ಕೋವಿಡ್ ತೀವ್ರತೆಯಿಂದಾಗಿ 3 ನೇ ಹಂತದ ಲಾಕ್ ಡೌನ್ ಜಾರಿ
ಮೆಲ್ಬರ್ನ್ಃ ಕೋವಿಡ್ ತೀವ್ರತೆಯಿಂದಾಗಿ 3 ನೇ ಹಂತದ ಲಾಕ್ ಡೌನ್ ಜಾರಿ
ಮೆಲ್ಬರ್ನ್ಃ ಕೋವಿಡ್ ತೀವ್ರತೆ ತಗ್ಗಿಸಲು ವಿಕ್ಟೋರಿಯಾ ಭಾಗದಲ್ಲಿ ಶುಕ್ರವಾರ ಇಂದಿನಿಂದ ಮೂರನೇಯ ಹಂತದ ಲಾಕ್ ಡೌನ್ ಘೋಷಿಸಲಾಗಿದೆ.
ಇಲ್ಲಿನ ರಾಜಧಾನಿಯಿಂದ ವೈರಸ್ ಹರಡದಂತೆ ನಿಯಂತ್ರಿಸಲು ವಿಕ್ಟೋರಿಯಾ ರಾಜ್ಯದಾದ್ಯಂತ ಐದು ದಿನಗಳ ಕಾಲ ಲಾಕ್ ಡೌನ್ ಜಾರಿಗೊಳಿಸಲಾಗಿದೆ ಎಂದು ವಿಕ್ಟೋರಿಯಾದ ಮುಖ್ಯಸ್ಥ ಡೇನಿಯಲ್ ಆ್ಯಂಡ್ರೂಸ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಆದರೆ ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿ ಮುಂದುವರೆಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಶಾಲೆಗಳು, ವಾಣಿಜ್ಯ ಚಟುವಟಿಕೆಗಳು ಸಹ ಸ್ಥಗಿತಗೊಳಿಸಲಾಗಿದೆ. ಅಗತ್ಯ ಸಾಮಾಗ್ರಿಗಳು ಖರೀದಿಗೆ ಜನತೆಗೆ ಹೊರಬರಬೇಕು. ಲಾಕ್ ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಅವರು ಸೂಚಿಸಿದ್ದಾರೆ.