ಪ್ರಮುಖ ಸುದ್ದಿ
ಜನಾರ್ಧನ ರಡ್ಡಿ ಪತ್ನಿ ಲಕ್ಷ್ಮೀ ಅರುಣಾಗೆ ಕ್ಲೀನ್ ಚೀಟ್ ನೀಡಿದ ಹೈಕೋರ್ಟ್
ಜನಾರ್ಧನ ರಡ್ಡಿ ಪತ್ನಿ ಲಕ್ಷ್ಮೀ ಅರುಣಾಗೆ ಕ್ಲೀನ್ ಚೀಟ್ ನೀಡಿದ ಹೈಕೋರ್ಟ್
ವಿವಿ ಡಿಸ್ಕ್ಃ ಮಾಜಿ ಸಚಿವ ಗಾಲಿ ಜನಾರ್ಧನರಡ್ಡಿ ಪತ್ನಿ ಲಕ್ಷ್ಮೀ ಅರುಣಾ ಅವರಿಗೆ ಹೈಕೋರ್ಟ್ ಕ್ಲೀನ್ ಚೀಟ್ ನೀಡಿದ್ದಾರೆ ಎನ್ನಲಾಗಿದೆ.
ರಡ್ಡಿ ಅವರ ಪತ್ನಿ ಮೈನಿಂಗ್ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದರು, ಅವರ ಹೆಸರನ್ನು ಸಿಬಿಐ ವಿಶೇಷ ನ್ಯಾಯಾಲಯ ಖುಲಾಸೆ ಮಾಡಿರುವದನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದರು.
ಈ ಕುರಿತು ಪರಿಶೀಲನೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳು ವಿಶೇಷ ಸಿಬಿಐ ನ್ಯಾಯಾಲಯ ನೀಡಿದ ಆದೇಶ ಎತ್ತಿ ಹಿಡಿದು ರಡ್ಡಿ ಪತ್ನಿ ಲಕ್ಷ್ಮೀ ಅರುಣಾಗೆ ಕ್ಲೀನ್ ಚೀಟ್ ನೀಡಿದೆ. ಇದರಿಂದ ರಡ್ಡಿ ಮತ್ತು ಅವರ ಪತ್ನಿ ಸಂತಸಗೊಂಡಿದ್ದು, ರಡ್ಡಿ ಆಪ್ತರು, ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.