ರಾಜಕೀಯ ನಿವೃತ್ತಿ ಇಚ್ಚಿಸಿದರೆ ಅನಂತಕುಮಾರ.?
ರಾಜಕೀಯ ನಿವೃತ್ತಿ ಇಚ್ಚಿಸಿದರೆ ಅನಂತಕುಮಾರ.?
ವಿವಿ ಡೆಸ್ಕ್ಃ ಬಿಜೆಪಿ ಫೈರ್ ಬ್ರ್ಯಾಂಡ್ ಎಂದೇ ಗುರುತಿಸಿಕೊಂಡಿದ್ದ ಉತ್ತರ ಕನ್ನಡ ಕ್ಷೇತ್ರದ ಸಂಸದ, ಕೇಂದ್ರದ ಮಾಜಿ ಸಚಿವ ಅನಂತಕುಮಾರ ಹೆಗಡೆ ರಾಜಕೀಯ ನಿವೃತ್ತಿ ಪಡೆಯಲಿದ್ದಾರೆಯೇ.? ಎಂಬ ಚರ್ಚೆ ಇದೀಗ ಶುರುವಾಗಿದೆ.
ಹಲವು ವರ್ಷಗಳಿಂದ ಬೆನ್ನು ನೋವು ಮತ್ತು ಕಾಲು ನೋವಿನಿಂದ ಬಳಲುತ್ತಿರುವ ಸಂಸದ ಅನಂತಕುಮಾರ ಹೆಗಡೆ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಈ ಕುರಿತು ಸಂಸದರ ಆಪ್ತ ಸಹಾಯಕರು ಪ್ರಕಟಣೆ ಬಿಡುಗಡೆ ಮಾಡಿದ್ದು, ಬೆನ್ನು ಮತ್ತು ಕಾಲು ನೋವು ತೀವ್ರತೆಯಿಂದ ಬಳಲುತ್ತಿರುವ ಹಿನ್ನೆಲೆ ತಜ್ಞ ವೈದ್ಯರು ಕಾಲಿನ ಶಸ್ತ್ರ ಚಿಕಿತ್ಸೆ ನಡೆಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಹೀಗಾಗಿ ಅವರು ಯಾವುದೇ ಸರ್ಕಾರಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಾಗುತ್ತಿಲ್ಲ. ಅನಾರೋಗ್ಯ ಹಿನ್ನೆಲೆ ರಾಜಕೀಯ ನಿವೃತ್ತಿ ಪಡೆಯುವ ವಿಚಾರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಏನೇ ಇರಲಿ ದೇವರು ಅವರಿಗೆ ಆದಷ್ಟು ಬೇಗನೆ ಆರೋಗ್ಯ ಭಾಗ್ಯ ಕಲ್ಪಿಸಲಿ ಜನ ಸೇವೆಯಲ್ಲಿ ಮುಂದುವರೆಯುವ ಅವಕಾಶ ಕಲ್ಪಿಸಲಿ ಎಂದು ಕಾರ್ಯಕರ್ತರು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ ಎನ್ನಲಾಗಿದೆ.