ಕಥೆ

‘ಮಾನಸಿ ಮತ್ತು ಆಶಿಶ್’ ಮಂಜುನಾಥ ಸಾಲಿಮಠ’ರ ಕಥಾಂಕುರ ಆರಂಭ

 

‘ಮಾನಸಿ ಮತ್ತು ಆಶಿಶ್’ ಅಚ್ಚುಮೆಚ್ಚಿನ ಜೋಡಿ

ಮಾನಸಿ…..
ಮಾನಸಿ ಸ್ತಬ್ಧವಾಗಿ ಕುಳಿತಿದ್ದಳು. ಅದೆಷ್ಟೋ ಹೊತ್ತು ಹಾಗೇ ಕುಳಿತಿದ್ದಳೋ.. ಅವಳಿಗೆ ಗೊತ್ತಿಲ್ಲಾ, ಅವಳ ಮನಸ್ಸು ಅವಮಾನದಿಂದ ಕುದಿಯುತ್ತಿತ್ತು. ನಾನೇನು ಕಡಿಮೆ ಮಾಡಿದ್ದೆ ಅವನಿಗೆ ಯಾಕೆ ಈ ರೀತಿಯಾದ ಎನ್ನುವ ಪ್ರಶ್ನೆಗಳಿಗೆ ಉತ್ತರವಿರಲಿಲ್ಲಾ.

ಯಾಕೆ ಹೀಗೆ ಮಾಡಿದೆ ಎಂದು ಕೇಳಿದಾಗ ತಿರುಗಿಯು ನೋಡದೆ ಹೋದವನು ಇನ್ನು ಬಂದಿಲ್ಲಾ. ಅವನ ಮನಸ್ಸಿಗೆ ನೋವಾಗುವಂತಹ ಮಾತನ್ನೇನು ಅವಳು ಹಾಡಿರಲಿಲ್ಲಾ. ಮತ್ತೆ ಹಾಗೇಕೆ ಹೊರಟು ಹೋದ ಈಗಿನ ಹುಡುಗರು ತುಂಬಾ ಸೂಕ್ಷ್ಮ ಮನಸ್ಸಿನವರು ಏನನ್ನೂ ಜೋರಾಗಿ ಹೇಳಬೇಡ ಎಂದು ಪತಿ ಮಧುಕರ ಮಾನಸಿಗೆ ಹೇಳುತ್ತಿದ್ದದ್ದು ನೆನಪಾಗಿ ಬೆಚ್ಚಿಬಿದ್ದಳು.

ಏನಾದರೂ ಮಾಡಿಕೊಂಡರೆ ನನ್ನ ತಮ್ಮ ಎಂದು ಮುದ್ದಿನ ತಮ್ಮ ಎಂದು ಮನಸ್ಸು ರೋಧಿಸಿತು. ಆಶಿಶ ಅವಳ ಏಕಮಾತ್ರ ತಮ್ಮ. ಅವನು ಮೂರು ವರ್ಷದವನಿದ್ದಾಗಲೇ ತಾಯಿ ತೀರಿಕೊಂಡಿದ್ದಳು.

ಮಾನಸಿ ಆಗ ಹತ್ತು ವರ್ಷದ ಸಣ್ಣ ಹುಡುಗಿ ತಮ್ಮನನ್ನ ಎತ್ತಿಕೊಂಡು ಅವನನ್ನು ಸಮಾಧಾನಪಡಿಸುತ್ತಾ ಅಳುತ್ತಾ ಅಸಹಾಯಕತೆಯನ್ನು ಅನುಭವಿಸಿದಳು. ತಂದೆ ದುಡಿಯಲು ಹೊರಗೆ ಹೋದಾಗ ತಮ್ಮ ಇವಳಿಗೆ ಅಂಟಿಕೊಂಡೆ ಬೆಳೆದ, ಇವಳ ಜೊತೆಯಲ್ಲಿಯೇ ಶಾಲೆಗೆ ಹೋಗುತ್ತಿದ್ದ, ಅವಳ ಪುಟ್ಟ ಮನಸ್ಸಿನಲ್ಲಿ ತಾಯ್ತನದ ಜಾಗೃತಿ ಆಗಿತ್ತು.

ಯವಾಗಲೂ ಆಶಿಶನನ್ನು ಎತ್ತಿಕೊಂಡೇ ಇರುತ್ತಿದ್ದಳು. ಅವನ ಮುದ್ದು ಮಾತುಗಳನ್ನು ಆಲಿಸುವುದು ಅವನು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವದು, ಅವನ ಅಳು ನಗುವಿನಲ್ಲಿ ಭಾಗಿಯಾಗುವದೇ ಮಾನಸಿಯ ಕೆಲಸವಾಗಿತ್ತು.

ತಂದೆ ಮಾಡಿಟ್ಟು ಹೋದ ಅಡುಗೆಯನ್ನು ಇಬ್ಬರೂ ಊಟ ಮಾಡಿ ಪುಟ್ಟ ಆಶುವಿನ ಕೈ ಹಿಡಿದು ಶಾಲೆಗೆ ಹೊರಡುತ್ತಿದ್ದಳು. ಮಾನಸಿ ತಮ್ಮನ ಪಾಲಿಗೆ ಸಹೃದಯಿ ವಾತ್ಸಲ್ಯಮಯಿಯಾಗಿ ಕಾಣುತ್ತಿದ್ದಳು. ನೆರೆಹೊರೆಯವರು ಇಬ್ಬರನ್ನು ನೋಡಿ ತಮ್ಮ ಮನೆಯ ಮಕ್ಕಳಿಗೂ ಮಾನಸಿ ಆಶಿಶನ ಹಾಗೇ ಇರುವಂತೆ ಉದಾಹರಿಸುತ್ತಿದ್ದರು.

ಮಾನಸಿ ಬೆಳೆದು ದೊಡ್ಡವಳಾಗಿದ್ದಳು ತಂದೆಗೆ ಮಗಳನ್ನು ಒಳ್ಳೆಯ ಮನೆ ಸೇರಿಸುವ ತವಕ.. (ಮುಂದುವರೆಯುವುದು…)

-ಮಂಜುನಾಥ ಸಾಲಿಮಠ, ಮಸ್ಕಿ
ಲೇಖಕರು,  ಪತ್ರಕರ್ತ

Related Articles

Leave a Reply

Your email address will not be published. Required fields are marked *

Back to top button