ಪ್ರಮುಖ ಸುದ್ದಿ

ಶಿರವಾಳ ಗೌಡ್ರು ಸದಾ ಹಸನ್ಮುಖಿ – ಅನ್ನದಾನ ಶ್ರೀ

ದಿ.ಶಿವಶೇಖರಪ್ಪಗೌಡರ 11 ನೇ ವರ್ಷದ ಪುಣ್ಯಸ್ಮರಣೆ

ಶಹಾಪುರಃ ದಿ.ಶಿವಶೇಖರಪ್ಪಗೌಡರು ನಮ್ಮೆಲ್ಲರನ್ನು ಅಗಲಿ 11 ವರ್ಷಗಳೇ ಕಳೆದಿವೆ. ಆದರೂ ಅವರು ನಮ್ಮೆಲ್ಲರ ಜೊತೆ ಜೀವಂತವಾಗಿದ್ದಾರೆ ಎಂದೆನಿಸುತ್ತಿದೆ ಎಂದರೆ ಅದಕ್ಕೆಲ್ಲ ಮುಖ್ಯ ಕಾರಣ ಅವರ ಸದಾ ಹಸನ್ಮುಖಿಯಾಗಿದ್ದರು. ಅವರ ನಗು ಎದುರಿನ ಮನುಷ್ಯನ ದುಃಖವನ್ನೆ ಮರೆಸುವಂತಿತ್ತು ಅಂತಹ ಕಲ್ಮಷ ನಗು ಅವರದ್ದಾಗಿತ್ತು ಎಂದು ಬೆಂಗಳೂರಿನ ಅನ್ನದಾನ ಶ್ರೀಗಳು ಅಭಿಪ್ರಾಯಪಟ್ಟರು.

ತಾಲೂಕಿನ ಶಿರವಾಳ ಗ್ರಾಮದಲ್ಲಿ ದಿ.ಶಿವಶೇಖರಪ್ಪಗೌಡ ಶಿರವಾಳರ 11 ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನಡೆದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶಿವಶೇಖರಪ್ಪಗೌಡರ ಹಸನ್ಮುಖ ಅವರನ್ನು ಭೇಟಿಯಾದ ಜನರನ್ನು ನಿರಮ್ಮಳನ್ನಾಗಿ ಮಾಡುತಿತ್ತು. ಅಂತಹ ಶಕ್ತಿ ಅವರ ವ್ಯಕ್ತಿತ್ವದಲ್ಲಿ ಮಾತ್ರವಲ್ಲ ಅವರ ನಗುವಿನಲ್ಲೂ ಇತ್ತು. ಮನೆಗೆ ಬಂದ ಕ್ಷೇತ್ರದ ಜನರ ಸಂಕಷ್ಟ, ಸಮಸ್ಯೆಗಳ ಪರಿಹಾರಕ್ಕೆ ಮಾರ್ಗ ಸೂಚಿಸುವ ಮೊದಲು ಅವರನ್ನು ಸಂತೈಸಿ ಊಟ ಮಾಡಿಸುವ ಮನೆತನ ಅವರದ್ದಾಗಿದೆ. ವದನಂ ಪ್ರಸಾದ ಸದನಂ, ಸದಯಂ ಹೃದಯಂ ಎಂಬಂತೆ ಶಿರವಾಳ ಗೌಡ್ರು ಇದ್ದರು.

ಅವರಂತೆ ಅವರ ಪುತ್ರ ಮಾಜಿ ಶಾಸಕ ಗುರು ಪಾಟೀಲರದು ಅದೇ ಸೌಮ್ಯ ಉತ್ತಮ ಗುಣವಂತಿಕೆಯನ್ನು ಹೊತ್ತು ತಂದೆಯ ಹಾಕಿದ ಸನ್ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಈ ಬಾರಿ ಕೊರೊನಾ ಹಾವಳಿಯಿಂದ ಜನರ ಬದುಕು ತತ್ತರಿಸಿ ಹೋಗಿದೆ. ಕೊರೊನಾ ಹಿನ್ನೆಲೆ ಈ ಬಾರಿ ಕಾರ್ಯಕ್ರಮ ಸರಳವಾಗಿ ಮಾಡಲಾಗುತ್ತಿದೆ ಎಂದು ಅಭಿಮಾನಿಗಳು ತಿಳಿಸಿದರು. ಕೊರೊನಾ ಸಾಕಷ್ಟು ಜನರ ಜೀವ ತಿಂದಿದೆ. ಅನಿವಾರ್ಯವಾಗಿ ಕೊರೊನಾ ನಿಯಮಗಳನ್ನು ಪಾಲಿಸುತ್ತಾ ಬದುಕು ಕಟ್ಟಿಕೊಳ್ಳಬೇಕಿದೆ. ಮುಂಬರುವ ದಿನಗಳಲ್ಲಿ ಕೊರೊನಾ ಮುಕ್ತ ದೇಶವಾಗಿ ಜನರ ಸಂಕಷ್ಟ ದೂರವಾಗಲಿ ಎಂದು ಹರಸಿದರು.

ಕುಕನೂರಿನ ಚನ್ನಮಲ್ಲಸ್ವಾಮೀಜಿ ಮಾತನಾಡಿ, ಪ್ರೀತಿ ವಿಶ್ವಾಸದ ಮುಂದೆ ಕೊರೊನಾ ಸಂಕಷ್ಟವು ಸಹ ಶೂನ್ಯವಾಗಿದೆ ಎಂದರೆ ತಪ್ಪಾಗಲಾರದು ಎಂದೆನಿಸುತ್ತಿದೆ. ಕಾರಣ ಈ ಬಾರಿ ಪುಣ್ಯ ಸ್ಮರಣೆ ಸರಳತೆಯಿಂದ ಕೂಡಿರುತ್ತದೆ. ಸ್ವಾಮೀಜಿಗಳು ಬರಿ ಸತ್ಕಾರ ಮಾಡಿಕೊಂಡು ಆಶೀರ್ವಾದ ನೀಡಬೇಕಷ್ಟೆ ಎಂದು ಭಕ್ತರು ತಿಳಿಸಿದ್ದರು. ಆದರೆ ಇಲ್ಲಿ ನೋಡಿದರೆ ಜನ ಬರುವಷ್ಟು ಜನ ಅವರ ಅಭಿಮಾನಿಗಳು, ಹಿತೈಷಿಗಳು ಬಂದಿರುವದು ನೋಡಿದರೆ, ಪ್ರೀತಿ ವಿಶ್ವಾಸದ ಮುಂದೆ ಯಾವ ಕೊರೊನಾನು ಏನು ಮಾಡಲ್ಲ ಎಂದೆನಿಸುತ್ತಿದೆ ಅಂದರು.

ಇನ್ನೂ ಗುರು ಪಾಟೀಲ್ ಶಿರವಾಳರು ತಂದೆಯಂತೆ ಸಜ್ಜನ ರಾಜಕಾರಣಿ, ಅವರು ಇನ್ನೂ ಸ್ಟ್ರಾಂಗ್ ಲೀಡರ್ ಆಗಬೇಕು ಬಹಳ ಸೌಮ್ಯ ಸ್ವಭಾವದವರಿದ್ದಾರೆ ಎಂದೆಲ್ಲ ಜನರು ಹೇಳುತ್ತಿರುತ್ತಾರೆ. ಆದರೆ ಅವರು ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡಿದ್ದು, ಯಾವುದೇ ಅಲ್ಲದ ಕೆಲಸಗಳನ್ನು ಮಾಡುವವರಲ್ಲ ಮತ್ತು ಅಕ್ರಮ ಕೆಲಸಗಳಿಗೆ ಬೆಂಬಲಿಸುವವರಲ್ಲ. ಕ್ಷೇತ್ರದ ಅಭಿವೃದ್ಧಿಗೆ ಚಿಂತನಾ ಪೂರ್ವಕವಾಗಿ ಸೇವೆ ಸಲ್ಲಿಸುವವರಾಗಿದ್ದಾರೆ ಎಂದರು.

ಮುಂಚಿತವಾಗಿ ಹಿರಿಯ ಸ್ವಾಮೀಜಿ ಅನ್ನದಾನ ಶ್ರೀಗಳಿಂದ ಮೊದಲಿಗೆ ದಿ.ಶೀವಶೇಖರಪ್ಪಗೌಡ ಶಿರವಾಳ ಅವರ ಗದ್ದುಗೆಗೆ ಪೂಜೆ ನೆರವೇರಿಸಲಾಯಿತು. ನಂತರ ನಡೆದ ಸರಳ ಸಮಾರಂಭದಲ್ಲಿ ಫಕೀರೇಶ್ವರ ಮಠದ ಗುರುಪಾದ ಮಹಾಸ್ವಾಮೀಜಿ, ಕಾಳಹಸ್ತೇಂದ್ರ ಶ್ರೀ, ಸಿದ್ದೇಶ್ವರ ಶಿವಾಚಾರ್ಯರು, ಚರಬಸವೇಶ್ವರ ಗದ್ದುಗೆಯ ಬಸಯ್ಯ ಶರಣರು, ಸಗರ ಒಕ್ಕಲಗೇರಿ ಮಠದ ಮಡಿವಾಳ ಮಹಾಂತ ಶಿವಾಚಾರ್ಯರು ಸ್ವಗ್ರಾಮದ ಸ್ವಾಮೀಜಿಗಳು ಉಪಸ್ಥಿತರಿದ್ದರು.

ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ, ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಮಲ್ಲಣ್ಣ ಮಡ್ಡಿ, ಲಾಲನಸಾಬ ಖುರೇಶಿ, ಅತೀಕ್ ಸಾಬ ಸಿದ್ದಿಕಿ, ಮಲ್ಲಿಕಾರ್ಜುನ ಚಿಲ್ಲಾಳ, ಮರೆಪ್ಪ ಪ್ಯಾಟಿ, ಗುರು ಕಾಮಾ ಸೇರಿದಂತೆ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು. ಮೊದಲಿಗೆ ಸಂಗೀತದ ಮೂಲಕ ಶ್ರದ್ಧಾಂಜಲಿ ಜರುಗಿತು. ಇದೇ ವೇಳೆ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ಬಂದವರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

Related Articles

Leave a Reply

Your email address will not be published. Required fields are marked *

Back to top button