ಲಿಂಗಾಯತ ಹೋರಾಟಗಾರ, ಸಾಹಿತಿ ಶಿವಕುಮಾರ್ ಉಪ್ಪಿನ ಕಾಂಗ್ರೆಸ್ ಗೆ?
ಲಿಂಗಾಯತ ಹೋರಾಟಗಾರ, ಸಾಹಿತಿ ಶಿವಕುಮಾರ್ ಉಪ್ಪಿನ ಕಾಂಗ್ರೆಸ್ ಗೆ?
ವಿವಿ ಡೆಸ್ಕ್ಃ ಲಿಂಗಾಯತ ಮಾನ್ಯತೆಯ ಹೋರಾಟದಲ್ಲಿ ಸಕ್ರಿಯವಾಗಿದ್ದ ಇಲ್ಲಿನ ಬರಹಗಾರ ಶಿವಕುಮಾರ್ ಉಪ್ಪಿನ ಶೀಘ್ರದಲ್ಲೇ ಕಾಂಗ್ರೆಸ್ ಸೇರುವುದು ಖಚಿತವಾಗಿದೆ.
ಜಿಲ್ಲೆಯ ಪ್ರಭಾವಿ ಮುಖಂಡ ಎಂ.ಬಿ.ಪಾಟೀಲರ ಜೊತೆ ನಿಕಟ ಸಂಪರ್ಕ ಹೊಂದಿರುವ, ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಇವರು ಮೊನ್ನೆ ಬೆಂಗಳೂರಿನ ಅವರ ಮನೆಯಲ್ಲಿ ಪಾಟೀಲರನ್ನು ಭೇಟಿಯಾಗಿ ಸಕ್ರಿಯ ರಾಜಕಾರಣಕ್ಕೆ ಸೇರುವ ಕುರಿತು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.
ಬಹುತೇಕ ಪಾಟೀಲರಿಂದ ಹಸಿರು ನಿಶಾನೆ ಸಿಕ್ಕಿದ್ದು, ಸಿಂದಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿಯವರ ಬೆಂಬಲಕ್ಕೆ ನಿಲ್ಲಲು ಶಿವಕುಮಾರ್ ನಿರ್ಧರಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದಿದೆ.
ಒಂದೆರಡು ವರ್ಷಗಳ ಹಿಂದೆಯೇ ಇವರಿಗೆ ರಾಜಕೀಯ ಸೇರಲು ಒತ್ತಡವಿತ್ತು. ಇವರ ಜತೆ ಈಗ ಅನೇಕ ಸಮಾನ ಮನಸ್ಕ ಸ್ನೇಹಿತರು, ಬೇರೆ ಬೇರೆ ವರ್ಗದ ಜನರೂ ತೊಡಗುವುದರಿಂದ ಈ ಉಪ ಚುನಾವಣೆ ವಿಭಿನ್ನವಾಗಿ ರಂಗೇರಲಿದೆ.
ಹಿನ್ನೆಲೆ
ಶಿವಕುಮಾರರ ಅಜ್ಜ ರಂಗಕರ್ಮಿ ಗಂಗಾಧರಪ್ಪ ಉಪ್ಪಿನರದು ಮೊದಲಿಂದಲೂ ಈ ಭಾಗದಲ್ಲಿ ದೊಡ್ಡ ಹೆಸರಿದೆ. ಇವರ ತಂದೆ ಸಿದ್ಧರಾಮ ಉಪ್ಪಿನರು ಕೂಡ ಸಾಹಿತಿ. ತಾಲೂಕಿನಲ್ಲಿ ಇವರ ಮನೆತನ ಕಲೆ, ಸಾಹಿತ್ಯ, ಸಂಘಟನೆ, ಸಾಮಾಜಿಕ ಹಿನ್ನೆಲೆಯಿಂದ ಪರಿಚಿತವಾಗಿದೆ.
ಶಿವಕುಮಾರ್ ಪತ್ರಕರ್ತರಾಗಿ ಹತ್ತಾರು ವರ್ಷಗಳ ಕಾಲ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ದುಡಿದಿದ್ದು, ತಮ್ಮ ನೇರ ಬರಹಗಳಿಂದ ಹೆಸರು ಪಡೆದಿದ್ದಾರೆ. ಸಮಾಜದಲ್ಲಿನ ಅನ್ಯಾಯ, ಕೆಟ್ಟ ವಿದ್ಯಾಮಾನ ನಡೆದಾಗ ತಕ್ಷಣ ಪ್ರತಿಕ್ರೀಯೆ ನೀಡುವ ಇಬರು ಸಮಾಜದ ಬಗ್ಹೆ ಅಪಾರ ಕಾಳಜಿ ಹೊಂದಿದ್ದಾರೆ. ಶರಣ ತತ್ವ ಮೈಗೂಡಿಸಿಕೊಂಡ ಇವರು ಯಾವುದೇ ಬೇಧಭಾವವುಲ್ಲದ ಸಮಾನತೆ ಉತ್ತಮ ಸಮಾಜ ನಿರ್ಮಾಣ ಮಾಡಬೇಕೆಂಬ ಹಂಬಲ ಹೊಂದಿದ್ದವರಾಗಿದ್ದಾರೆ. ತಮ್ಮ ಕಳಕಳಿಯ, ನೇರ ನಿಷ್ಠೆ ಬರಹಗಳ ಮೂಲಕ ನಾಡಿನಾದ್ಯಂತ ಪರಿಚಯಿಸಿಕೊಂಡಿದ್ದಾರೆ. ಪತ್ರಿಕೋದ್ಯಮವೂ ಸೇರಿ ರಾಜ್ಯದ ಎಲ್ಲ ರಂಗಗಳ ಪ್ರಮುಖರೊಂದಿಗೆ ಇವರ ಒಡನಾಟವಿದೆ.
ಇವರ ಸೋದರ ಮಾವ ಈ ಹಿಂದೆ ಸಿಂದಗಿಯ ಶಾಸಕರಾಗಿದ್ದರು. ಇಷ್ಟೆಲ್ಲ ಹಿನ್ನೆಲೆ ಇರುವ ಇವರು ಈಗ ಕಾಂಗ್ರೆಸ್ ಸೇರುತ್ತಾರೆನ್ನುವುದು ಚರ್ಚೆಗೆ ಕಾರಣವಾಗಿದೆ. ಈ ಭಾಗದಲ್ಲಿ ಒಂದಿಷ್ಟಾದರೂ ಬದಲಾವಣೆಗೆ ಇದು ಪೂರಕವಾಗಬಹುದು. ಸಂಭಾವಿತರೂ ರಾಜಕೀಯಕ್ಕೆ ಬರುವುದು ಉತ್ತಮ ಬೆಳವಣಿಗೆ ಎಂದರೆ ತಪ್ಪಿಲ್ಲ.
…
ವಿನಯವಾಣಿಗೆ ಉಪ್ಪಿನ್ ಪ್ರತಿಕ್ರಿಯೆ..!
ಜಿಲ್ಲೆಯ ಜನಪರ ನಾಯಕರಾದ ಎಂ.ಬಿ.ಪಾಟೀಲ್ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಬಿಟ್ಟರೆ ಈ ಸಂದರ್ಭದಲ್ಲಿ ತಮಗೆ ಬೇರೆ ಆಯ್ಕೆ ಕಾಣಿಸುತ್ತಿಲ್ಲ ಎಂದು ಶಿವಕುಮಾರ್ ಉಪ್ಪಿನ ಪ್ರತಿಕ್ರಿಯಿಸಿದ್ದಾರೆ.‘ರಾಜಕಾರಣ ಎಂದರೆ ಹೊಲಸು’ ಎಂದು ಎಲ್ಲರೂ ಮೂಗು ಮುರಿಯುತ್ತ ಕುಳಿತರೆ ಅದನ್ನು ಸುಧಾರಿಸುವವರು ಯಾರು? ಸಿಂದಗಿಯ ಅಭಿವೃದ್ಧಿ, ಸಹ್ಯ ವಾತಾವರಣದ ಕಾರಣ ಸಕ್ರಿಯ ರಾಜಕಾರಣ ಅನಿವಾರ್ಯ ಎನಿಸಿದೆ. ಸಾಮಾನ್ಯರೊಂದಿಗೆ ತೊಡಗಿ ನಾವೆಲ್ಲ ಸಮಾಜಕ್ಕೆ ಏನಾದರೂ ನೀಡುವುದರ ಜತೆಗೆ, ನಮ್ಮ ಭವಿಷ್ಯವನ್ನೂ ರೂಪಿಸಿಕೊಳ್ಳುವ ಕೆಲಸ ಮಾಡಬೇಕಿದೆ ಎಂದು ಉಪ್ಪಿನ್ ತಿಳಿಸಿದ್ದು, ಇಷ್ಟರಲ್ಲೇ ತಮ್ಮ ನಿರ್ಧಾರ ಹೇಳುತ್ತೇನೆ ಎಂದಿದ್ದಾರೆ.