ಮನೆಯ ನಿಬಂಧನೆ ಮೀರಿ ಯುವತಿ ದೇಶ ಕಾಯುವ ಸೈನಿಕಳಾದಳು
ಹೊಸಲು ದಾಟಿ ಹೋಗಬಾರದು ಎಂಬ ನಿಬಂಧನೆಯನ್ನು ದಾಟಿ… ದೇಶದ ರಕ್ಷಣೆ ಮಾಡುವ ಸೈನಿಕಳಾದಳು.!!
ಅದೆಷ್ಟೋ ವರ್ಷಗಳಿಂದ ಸಮಾಜ ಕೆಲವು ಮೂಢನಂಬಿಕೆಗಳನ್ನು, ಆಚಾರಗಳನ್ನು ಮಹಿಳೆಯರ ಮೇಲೆ ಏರುತ್ತಲೇ ಬಂದಿದೆ. ಇಂದಿಗೂ ಬಹಳಷ್ಟು ಕಡೆ ಅವು ಮುಂದುವರೆಯುತ್ತಿವೆ. ಅಂತಹ ಪದ್ಧತಿಗಳು ಮುಂದುವರೆಯುತ್ತಿರುವ ಗ್ರಾಮಗಳಲ್ಲಿ ಆ ಗ್ರಾಹ ಸಹ ಒಂದು. ಅಲ್ಲಿ ಮುಖ್ಯವಾಗಿ ಯಾವುದೇ ಕುಟುಂಬದಲ್ಲಾದರೂ ಮಹಿಳೆಯರು ಹೊಸಲು ದಾಟಿ ಹೊರಗೆ ಹೋಗಬಾರದು.
ಹೊರಗಿನ ವ್ಯಕ್ತಿಗಳು ಬಂದರೆ ಯಾವಾಗಲೂ ಮುಸುಕು ಧರಿಸಿರಬೇಕು. ಅಂತಹ ಕುಟುಂಬಗಳಲ್ಲಿ ಇರುವ ಮಹಿಳೆಯರು ಹೊರಗೆ ಹೋಗುವುದೇ ಕಷ್ಟ. ಉದ್ಯೋಗ ಮಾಡುವುದೆಂದರೆ ಅದು ಸಾಧ್ಯವಾಗದ ಕೆಲಸ.
ಆದರೆ ಅಂತಹ ಒಂದು ಕುಟುಂಬದಿಂದ ಬಂದ ಮಹಿಳೆಯೊಬ್ಬರು ಮಾತ್ರ ಇಂತಹ ಮೂಢನಂಬಿಕೆಯನ್ನು ಮೆಟ್ಟಿನಿಂತು ಹೊರಗೆ ಹೋಗಿ ಏಕಾಏಕಿ ಆರ್ಮಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆಕೆ ಹೆಸರು ಪ್ರೇರ್ನಾ ಸಿಂಗ್. ಆಕೆಯದು ರಾಜಸ್ಥಾನದಲ್ಲಿನ ಜೋಧ್ಪುರ.
ಅಲ್ಲೇ ಇರುವ ಮಂಧಾತಾ ಸಿಂಗ್ ಎಂಬ ವ್ಯಕ್ತಿಯೊಂದಿಗೆ ನಾಲ್ಕು ವರ್ಷಗಳ ಹಿಂದೆ ವಿವಾಹ ಆಯಿತು. ವಿವಾಹದ ಸಮಯಕ್ಕೆ ಆಕೆ ಆರ್ಮಿ ಆಫೀಸರ್. 6 ವರ್ಷಗಳ ಹಿಂದೆ ಆರ್ಮಿಯಲ್ಲಿ ಸೇರಿದಳು. ಆರ್ಮಿಯಲ್ಲಿ ಇಂಜಿನಿಯರಿಂಗ್ ಕಾರ್ಪ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಮೀರತ್, ಜೈಪುರ್ನಲ್ಲಿ ಕೆಲಸ ಮಾಡಿದ್ದಾರೆ. ಈಗ ಪುಣೆಗೆ ವರ್ಗವಾಗಿದ್ದಾರೆ.
ಈಗ ಅವರ ಉದ್ಯೋಗ ಅಲ್ಲೇ. ಆದರೆ ಮೇಲೆ ಹೇಳಿದವಲ್ಲವೇ ಮೂಢನಂಬಿಕೆಗಳು ಎಂದು. ಅಂತಹ ಒಂದು ಗ್ರಾಮದಲ್ಲೇ ಪ್ರೇರ್ನಾ ಸಿಂಗ್ ಇರುವುದು. ಆದರೂ ಆಕೆ ಅಂತಹ ಕಂದಾಚಾರಗಳಿಗೆ ಮಂಗಳ ಹಾಡಿದ್ದಾರೆ.
ಮಹಿಳೆಯರು ಏನಾದರೂ ಸಾಧಿಸಬಹುದೆಂದು ನಿರೂಪಿಸಲು ಆಕೆ ಆರ್ಮಿಯಲ್ಲಿ ಸೇರಿ ಆಫೀಸರ್ ಆಗಿದ್ದಾರೆ. ಇದರಿಂದ ತಮ್ಮ ಗ್ರಾಮದಿಂದ ಆರ್ಮಿಗೆ ಸೇರಿದ ಮೊದಲ ಮಹಿಳೆ ಎಂದು ಹೆಸರು ಗಳಿಸಿದ್ದಾರೆ.
ಈ ಹಿನ್ನೆಲೆಯಲ್ಲೇ ಅಲ್ಲಿನ ಮಹಿಳೆಯರಿಗೆ ಆಕೆ ಸ್ಫೂರ್ತಿಯಾಗಿ ನಿಂತಿದ್ದಾರೆ. ಇನ್ನು ಪ್ರೇರ್ನಾಗೆ ಒಬ್ಬ ಮಗಳಿದ್ದಾಳೆ. ಆ ಮಗುವಿನ ಹೆಸರು ಪ್ರತಿಷ್ಟ. ವಯಸ್ಸು 3 ವರ್ಷಗಳು. ಆಕೆ ಅಜ್ಜಿಯಂದಿರ ಜತೆ ಬೆಳೆಯುತ್ತಿದ್ದಾರೆ.
ಆದರೂ ಪ್ರೇರ್ನಾ ಮಾತ್ರ ದೇಶಕ್ಕೆ ಸೇವೆ ಸಲ್ಲಿಸಲು ಆರ್ಮಿಯಲ್ಲಿ ಮುಂದುವರೆಯುತ್ತಿದ್ದಾರೆ. ಈ ವಿಚಾರದಲ್ಲಿ ಪ್ರೇರ್ನಾರನ್ನು ಎಲ್ಲರೂ ಅಭಿನಂದಿಸಲೇಬೇಕು..!
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882