ಪ್ರಮುಖ ಸುದ್ದಿ
ಬಿಜೆಪಿಯಲ್ಲಿ ಮೂರು ಗುಂಪು ಎನ್ನುವದು ಸುಳ್ಳು -ಆರ್.ಶಂಕರ್
ಬಿಜೆಪಿಯಲ್ಲಿ ಮೂರು ಗುಂಪು ಎನ್ನುವದು ಸುಳ್ಳು -ಆರ್.ಶಂಕರ್
ಯಾದಗಿರಿಃ ಬಿಜೆಪಿಯಲ್ಲಿ ಮೂರು ಗುಂಪುಗಳಿವೆಯಂತೆ.? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಯಾವ ಮೂರು ಇಲ್ಲ ಮೂವತ್ತಾರು ಗುಂಪು ಇಲ್ಲ. ಅದೆಲ್ಲ ಸುಳ್ಳು ಆರೋಪ. ಬಿಜೆಪಿ ಒಂದೇ ಪಕ್ಷದ ವೇದಿಕೆಯಡಿ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ ಎಂದು ಯಾದಗಿರಿ ಉಸ್ತುವಾರಿ ಸಚಿವ ಆರ್.ಶಂಕರ ಹೇಳಿದರು.
ನಗರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯಾರೋ ದೆಹಲಿಗೆ ಹೋಗಿ ಬಂದ್ರು ಯಾರೋ ಒಬ್ಬರು ಯಾವುದೋ ಕಾರಣಕ್ಕೆ ಅಪಸ್ವರ ಎತ್ತಿದ ಮಾತ್ರಕ್ಕೆ ಬದಲಾವಣೆನೇ ಮಾಡಕ್ಕಾಗುತ್ತಾ,.?
ಹಾಗಾದರೆ ದಿನಕ್ಕೊಬ್ಬರಿಗೆ ಸಿಎಂ ಮಾಡಬೇಕಾಗುತ್ತೆ. ಅವೆಲ್ಲ ಸುಳ್ಳು. ಯಡಿಯೂರಪ್ಪನವರೇ ಇನ್ನೂ ಎರಡು ವರ್ಷ ಸಿಎಂ ಆಗಿ ಮುಂದುರೆಯಲಿದ್ದಾರೆ ಎಂದರು.