ದರ್ಶನಾಪುರ ಸಚಿವರಾಗಿ 25 ನೇ ವರ್ಷ-ಅಭಿಮಾನಿ ಬಳಗದಿಂದ ಸಂಭ್ರಮ
ಬಾಪುಗೌಡ ದರ್ಶನಾಪುರ ಅಭಿಮಾನಿ ಬಳಗದಿಂದ ಸಂಭ್ರಮಾಚರಣೆ
yadgiri, ಶಹಾಪುರಃ ಮಾಜಿ ಸಚಿವ, ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಸಚಿವರಾಗಿ ಸೋಮವಾರ ಜೂ.7 ರಂದು 25 ವರ್ಷಗಳು ಉರುಳಿದ ಹಿನ್ನೆಲೆ ರಜತ ಮಹೋತ್ಸವದ ಸವಿನೆನಪಿನಂಗವಾಗಿ ಅವರ ಅಭಿಮಾನಿ ಬಳಗ ಕೇಕ್ ಕಟ್ ಮಾಡಿ ಅತ್ಯಂತ ಸರಳವಾಗಿ ಪರಸ್ಪರರು ಸಿಹಿ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದರು.
ಜೆ.ಎಚ್.ಪಟೇಲ್ ಅವರ ಸಂಪುಟದಲ್ಲಿ ಪ್ರಥಮ ಬಾರಿಗೆ ಇಂಧನ ಖಾತೆ ಸಚಿವರಾಗಿ ಶರಣಬಸಪ್ಪಗೌಡ ದರ್ಶನಾಪುರ ಆಯ್ಕೆಗೊಂಡಿದ್ದರು. ಆಗ ಪ್ರಥಮವಾಗಿಯೇ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ಸಂಪುಟದಲ್ಲೂ ಸೇರಿಕೊಂಡಿದ್ದರು. ಇಂದಿಗೆ 25 ವಸಂತಗಳು ಉರುಳಿದ ಸ್ಮರಣೆ ಹಂಚಿಕೊಂಡು ಅವರ ಬಳಗ, ಇಂದು ಬಾಪುಗೌಡ ನಗರದಲ್ಲಿ ಪರಸ್ಪರರು ಸಿಹಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದರು.
ದರ್ಶನಾಪುರ ಅವರು ಸಚಿವರಾಗಿದ್ದ ಅವಧಿಯ ಅಭಿವೃದ್ಧಿ ಕಾರ್ಯಗಳನ್ನು ಸ್ಮರಿಸಿದ ಅಭಿಮಾನಿ ಬಳಗ, ಕ್ಷೇತ್ರದ ಗ್ರಾಮೀಣ ಭಾಗಕ್ಕೆ ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತು ನೀಡಿದ್ದರು. ಹೋಬಳಿ ಮಟ್ಟದಲ್ಲಿ ವಿದ್ಯುತ್ ಸ್ಟೇಷನ್ ನಿರ್ಮಾಣ ಮಾಡುವ ಮೂಲಕ ವಿದ್ಯುತ್ ಅಭಾವ ನೀಗಿಸುವತ್ತ ಅಡಿಪಾಯ ಹಾಕಿದ್ದರು.
ಇಂದಿಗೂ ಶಾಸಕರಾದಿಯಾಗಿ ಅವರ ತಂದೆ ಬಾಪುಗೌಡರಂತೆ ಕ್ಷೇತ್ರದ ಅಭಿವೃದ್ಧಿಕಾರ್ಯದಲ್ಲಿ ಸದಾ ಮುಂದು. ಅಲ್ಲದೆ 2007 ರಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅವರ ಸಚಿವ ಸಂಪುಟದಲ್ಲಿ ಕೃಷಿ ಮಾರುಕಟ್ಟೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ದರ್ಶನಾಪುರ ಅವರ ಕ್ಷೇತ್ರದ ಹಿತ ಚಿಂತನೆ ಅವರು ಮಾಡುವ ಪ್ರತಿ ಕೆಲಸವನ್ನು ತೋರಿಸಿ ಕೊಡುತ್ತದೆ ಎಂದು ಮುಖಂಡ ವಿಶ್ವನಾಥ ಚೌದ್ರಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಿಶ್ವನಾಥರಡ್ಡಿ ದರ್ಶನಾಪುರ, ಆಶ್ರಯ ಕಮಿಟಿ ಅಧ್ಯಕ್ಷ ವಸಂತಕುಮಾರ ಸುರಪುರಕರ್ ತಿಳಿಸಿದರು. ಮುಖಂಡ ವಿಶ್ವನಾಥರಡ್ಡಿ ದರ್ಶನಾಪುರ. ವಸಂತಕುಮಾರ ಸುರಪುರಕರ್, ಡಾ.ನವೀನ್ ದರ್ಶನಾಪುರ, ಡಾ.ವಿಜಯ ಗೋಲಗೇರಿ, ಶರಣು ಇಟಗಿ, ಮುನಿಯಪ್ಪ ವಾಲಿ ಇತರರಿದ್ದರು.
ಮೊದಲ ಬಾರಿ ಇಂಧನ ಸಚಿವರಾಗಿ ಆಯ್ಕೆಯಾದ ದರ್ಶನಾಪುರ ಸಾಹೇಬರು ಉತ್ತಮ ಕೆಲಸ ಮಾಡಿದ್ದಾರೆ. ಕ್ಷೇತ್ರದ ಹೋಬಳಿ ಮಟ್ಟದಲ್ಲಿ ವಿದ್ಯುತ್ ಉಪಕೇಂದ್ರಗಳನ್ನು ನಿರ್ಮಿಸುವ ಮೂಲಕ ಸಮರ್ಪಕ ವಿದ್ಯುತ್ ಪೂರೈಕೆಯಾಗುವಂತೆ ಮಾಡಿದರು. ಕೃಷಿ ಮಾರುಕಟ್ಟೆ ಸಚಿವರಾದಾಗಲೂ ಕ್ಷೇತ್ರದಲ್ಲಿ ಹೋಬಳಿ ಮಟ್ಟದಲ್ಲಿ ಕೃಷಿ ಮಾರುಕಟ್ಟೆ ನಿರ್ಮಾಣ ಮಾಡಿದರು. ಸದಾ ಕ್ಷೇತ್ರದ ಅಭಿವೃದ್ಧಿಗಾಗಿ ಅವರ ಜೀವನ ಮುಡಿಪಾಗಿದೆ. ಕ್ಷೇತ್ರದ ಹಿತ ಚಿಂತನಕಾರರು, ದೀನ ದಲಿತರ ಪರ ಅಪಾರ ಕಾಳಜಿ ಹೊಂದಿದ್ದು, ಸರ್ಕಾರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಮುಂಚೂಣಿಗರು. ಹೀಗಾಗಿ ಹಳ್ಳಿಗರ ಪಾಲಿನ ಕ್ಷೇತ್ರ ಕಾಯೋ ಒಡೆಯ ದರ್ಶನಾಪುರ ಸಾಹೇಬರು. ಇಂದಿಗೆ ಪ್ರಥಮವಾಗಿ ಸಚಿವರಾಗಿ 25 ವಸಂತಗಳ ಕಳೆದದ್ದರಿಂದ ನೆನಪಿನಂಗವಾಗಿ ಸಂತಸ ಹಂಚಿಕೊಂಡಿವೆ.
–ವಸಂತಕುಮಾರ ಸುರಪುರಕರ್. ಆಶ್ರಯ ಕಮಿಟಿ ಅಧ್ಯಕ್ಷ