ಕಥೆ

ಜಿಪುಣನಿಗೆ ದಾನದ ಸುಖ ಉಣಿಸಿದ ಸಮರ್ಥ

ದಾನದ ಸುಖ

ಗಣನಾಥ ಉಳ್ಳೂರಿನಲ್ಲಿ ಅಗರ್ಭ ಶ್ರೀಮಂತ. ಆದರೆ ಆತ ಜಿಪುಣಾಗ್ರೇಸರ. ಎಂದಿಗೂ ಹೊಟ್ಟೆ ತುಂಬಾ ಉಂಡವನು ಅಲ್ಲ. ಒಳ್ಳೆಯ ಬಟ್ಟೆ ಧರಿಸಿದವನೂ ಅಲ್ಲ. ಯಾರಿಗೂ ಒಂದು ಬಿಡಿಗಾಸನ್ನೂ ನೀಡಿದವನಲ್ಲ.

ಒಮ್ಮೆ ಉಳ್ಳೂರಿನಲ್ಲಿ ತೀವ್ರ ಕ್ಷಾಮ ಬಂದಿತ್ತು. ಸಾವಿರಾರು ಜನರು ಸತ್ತರು. ಎಷ್ಟೋ ಮಂದಿ ನಿರಾಶ್ರಿತರಾದರು. ಜನರ ದುಸ್ಥಿತಿಗೆ ನೆರವಾಗಲು ಸಮರ್ಥನೊಬ್ಬ ಮುಂದಾದ. ಜನರ ಬಳಿ ವಂತಿಕೆ ಸಂಗ್ರಹಿಸಲು ಮುಂದಾದರೂ ಸಂಪೂರ್ಣ ನಿರಾಸೆ ಕಾದಿತ್ತು. ತಕ್ಷಣ ಅವನಿಗೊಂದು ಉಪಾಯ ಹೊಳೆಯಿತು.

ಈ ಗಣನಾಥನ ಹತ್ತಿರ ಬಂದು “ನೀವೇನೂ ದಾನ ಕೊಡಬೇಡಿ ಆದರೆ ಹತ್ತು ಸಾವಿರ ರೂಪಾಯಿಗಳಿಗೆ ಒಂದು ಚೆಕ್ ಬರೆದುಕೊಡಿ. ಆ ಚೆಕ್ಕನ್ನು ಇಂದು ಸಂಜೆಯೇ ನಿಮಗೆ ಗ್ಯಾರಂಟಿ ತಿರುಗಿಸಿವೆ” ಎಂದು ನಮ್ರ ಮೊರೆ ಸಲ್ಲಿಸಿದ.

ಜೀಪುಣನಿಗೆ ಆಶ್ಚರ್ಯವಾಯಿತು. ಸಂಜೆ ತನಕ ಆ ಚೆಕ್ ಇಟ್ಟು ಕೊಂಡು ಏನು ಮಾಡುವಿ? ಎಂದು ಪ್ರಶ್ನಿಸಿದ. ಆಗ ಸಮರ್ಥ “ಈ ಊರಿನಲ್ಲಿ ಅತಿ ಶ್ರೀಮಂತರಾದ ನೀವೇ ಇಷ್ಟೊಂದು ಹಣವನ್ನು ಕೊಟ್ಟಿರುವಿರಿ ಎಂದು ನಾನು ತೋರಿಸಿದಾಗ ಉಳಿದವರಿಗೂ ಕೊಡುವ ಮನಸ್ಸು ಖಂಡಿತವಾಗಿಯೂ ಬಂದೇ ಬರುತ್ತದೆ.

ನಿಮಗಾಗ ದಾನ ಮಾಡದೇ ದಾನದ ಪುಣ್ಯವೂ ಬರುವುದು” ಎಂದನು. ಗಣನಾಥ ತಕ್ಷಣವೇ ಚೆಕ್ ಬರೆದುಕೊಟ್ಟ. ಚೆಕ್ಕನ್ನು ನೋಡಿದ ಶ್ರೀಮಂತರೊಳಗೆ ದಾನದ ಸ್ಪರ್ಧೆ ನಡೆಯಿತು. ಸಂಜೆ ಒಳಗೆ ಬಹಳಷ್ಟು ಹಣವೂ ಸಂಗ್ರಹವಾಯಿತು.

ಸಂಜೆ ಆ ಚೆಕ್ ಹಿಂದಿರುಗಿಸಲು ಸಮರ್ಥ್ ಬಂದ. ಆದರೆ ಜಿಪುಣನು ಮರಳಿ ಪಡೆಯಲು ಸರ್ವಥಾ ಒಪ್ಪಿಕೊಳ್ಳಲಿಲ್ಲ. ಸಮರ್ಥನೆಗೆ ಆಶ್ಚರ್ಯವಾಯಿತು.

ಗಣನಾಥ ದಾನ ಮಾಡುತ್ತಾನೆಂದು ಅವನು ಕನಸಿನಲ್ಲೂ ಯೋಚಿಸಿರಲಿಲ್ಲ. “ನೀವೇಕೆ ಚೆಕ್ ವಾಪಸ್ಸು ತೆಗೆದುಕೊಳ್ಳುತ್ತಿಲ್ಲ” ಎಂದು ಕೇಳಿದಾಗ ಗಣನಾಥ ‘ಇದುವರೆಗೂ ನನಗೆ ದಾನದ ಸುಖವೇನೆಂದು ತಿಳಿದಿರಲಿಲ್ಲ.

ನಾನು ನಿನಗೆ ಚೆಕ್ ಕೊಟ್ಟ ನಂತರವೇ ನನ್ನನ್ನು ಮನಸಾರೆ ಪ್ರಶಂಸಿಸುವವರ ಗುಂಪೇ ನನ್ನ ಮನೆಯೆದುರು ನಿಂತಿದೆ. ಇವತ್ತು ನಾನು ಆನಂದಿಸಿದಷ್ಟು ನೆಮ್ಮದಿ, ಸುಖ, ಶಾಂತಿ, ಮಾತ್ರ ಈ ಹಿಂದೆ ಎಂದೆಂದೂ ನನಗೆ ಸಿಕ್ಕಿರಲೇ ಇಲ್ಲ.

ಸಮರ್ಥ ಅವರಿಗೆ ಕೃತಜ್ಞತೆಯನ್ನು ಅಪಿರ್ಸಿದಾಗಲೇ ಗಣನಾಥನು ಅವನ ಕೈಗೆ ಹತ್ತು ಸಾವಿರ ರೂಪಾಯಿಗಳ ಇನ್ನೊಂದು ಚೆಕ್ ಬರೆದು ಕೊಟ್ಟ.

ನೀತಿ :– ತ್ಯಾಗದಿಂದ ಆನಂದ, ನಿತ್ಯತೃಪ್ತಿ ಉಂಟಾಗುತ್ತದೆ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button