ಪ್ರಮುಖ ಸುದ್ದಿ
ಮೂವರು ದುಷ್ಕರ್ಮಿಗಳಿಂದ ಗೌರಿ ಲಂಕೇಶ ಹತ್ಯೆ
ಮೂವರು ದುಷ್ಕರ್ಮಿಗಳಿಂದ ಗೌರಿ ಲಂಕೇಶ ಹತ್ಯೆ
ಬೆಂಗಳೂರುಃ ನಾಡಿನ ಖ್ಯಾತ ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಅವರನ್ನು ರಾಜಾರಾಜೇಶ್ವರಿ ನಗರದ ಅವರ ಮನೆಯ ಹತ್ತಿರವೇ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆಗೈದ ಘಟನೆ ಇಂದು ನಡೆದಿದೆ.
ಪತ್ರಕರ್ತೆ ಗೌರಿ ಲಂಕೇಶ ಅವರು , ಮಂಗಳವಾರ ರಾತ್ರಿ 8: 00 ಗಂಟೆಯ ಸಮಯಕ್ಕೆ ತಮ್ಮ ಮನೆಯ ಹೊರಗಡೆ ವಿಶ್ರಾಂತವಾಗಿ ನಿಂತುಕೊಂಡಿದ್ದಾಗ, ಮೂವರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಗುಂಡಿನ ದಾಳಿಯಿಂದ ಗೌರಿ ಲಂಕೇಶ ಅವರ ಹಣೆ ಹಾಗೂ ಎದೆಗೆ ಗುಂಡು ತಗಲಿದ್ದು, ಗಂಭೀರ ಗಾಯಗೊಂಡ ಪರಿಣಾಮ ಸ್ಥಳದಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇದರೊಂದಿಗೆ ಕರ್ನಾಟಕದಲ್ಲಿ ಮತ್ತೊಂದು ವಿಚಾರವಾದಿಯ ಹತ್ಯೆಯಾಗಿದೆ. ಡಾ.ಎಂ.ಎಂ ಕಲಬುರುಗಿ ಅವರನ್ನು ಕೊಲೆಗೈದ ರೀತಿಯಲ್ಲೇ ಗೌರಿ ಲಂಕೇಶ್ ಅವರ ಹತ್ಯೆಯಾಗಿದೆ ಎಂದು ಊಹಿಸಲಾಗಿದೆ.