ಪ್ರಮುಖ ಸುದ್ದಿ
ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ
ಸಿಎಂ BSY ರಾಜೀನಾಮೆ..! ಅಧಿಕೃತ ಹೇಳಿಕೆ
ಬೆಂಗಳೂರಃ ರಾಜ್ಯ ಭವನಕ್ಕೆ ತೆರಳಿ ರಾಜೀನಾಮೆ ನೀಡಲು ತೀರ್ಮಾನಿಸಿದ್ದೇನೆ. ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ನಡ್ಡಾ ಅವರು 75 ವರ್ಷ ದಾಟಿದರೂ ಎರಡು ವರ್ಷ ಸಿಎಂ ಆಗಿ ಮುಂದುವರೆಯಲು ಅವಕಾಶ ಕಲ್ಪಿಸಿದ್ದು, ಶಬ್ಧಗಳ ಮೂಲಕ ಅಭಿನಂದನೆ ಸಲ್ಲಿಸಲಾಗುವದಿಲ್ಲ. ಯಾರು ಅನ್ಯತಾ ಭಾವಿಸಬೇಡಿ ಎಲ್ಲರೂ ಊಟ ಮಾಡಿದ ನಂತರ ನಾನು ರಾಜ್ಯಪಾಲರ ಭೇಟಿಯಾಗಿ ರಾಜೀನಾಮೆ ಸಲ್ಲಿಸುವ ನಿರ್ಧಾರ ಮಾಡಿಯಾಗಿದೆ.
ದುಃಖದಿಂದ ರಾಜೀನಾಮೆ ನೀಡುತ್ತಿಲ್ಲ. ಸಂತೋಷ ಖುಷಿಯಿಂದಲೇ ರಾಜೀನಾಮೆ ನೀಡುತ್ತೇನೆ. ಪ್ರಧಾನಿ ಮೋದಿ, ಅಮಿತ್ ಶಾ ಅವರ ಅಭಿಲಾಷೆ ಏನಿದೆಯೋ ಕರ್ನಾಟಕದಲ್ಲಿ ಪಕ್ಷ ಬಲವರ್ಧನೆಯಾಗಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕಿದೆ ಆ ನಿಟ್ಟಿನಲ್ಲಿ ನಾವು ನೀವೆಲ್ಲರೂ ಶ್ರಮಿಸೋಣ ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದು ಸಿಎಂಯಾಗಿ ಎರಡನೇ ವರ್ಷ ಪೂರೈಸಿದ ಇಂದಿನ ಸಾಧನ ಸಮಾರೋಪ ಸಮಾರಂಭದಲ್ಲಿ ಈ ವಿಷಯವನ್ನು ಸ್ಪಷ್ಟ ಪಡಿಸಿದರು.