ಹುಲಿ, ಕರಡಿ ಮತ್ತು ಮನುಷ್ಯ ಯಾರಿಗಿದೆ ನಿಯತ್ತು..? ಈ ಕಥೆ ಓದಿ
ಮನುಷ್ಯ ಸಹಜ ಬುದ್ಧ
ಒಂದು ಸಣ್ಣ ಊರು, ಮಾದ ಸೌದೆ ಒಡೆದು ಜೀವನ ಸಾಗಿಸುತ್ತಿದ್ದ. ಒಮ್ಮೆ ಅವನು ಕಾಡಿನಿಂದ ಮನೆಗೆ ಬರುವಾಗ ಕತ್ತಲಾಗಿತ್ತು. ಕಾಡಿನಲ್ಲಿ ಒಂದು ಹುಲಿಯೇ ಅಟ್ಟಿಸಿಕೊಂಡು ಬಂದಿತ್ತು. ತಕ್ಷಣ ಒಂದು ಮರದ ಮೇಲೇರಿ ಕುಳಿತುಕೊಂಡ. ಅಲ್ಲೇ ಮೇಲಿನ ಕೊಂಬೆಯಲ್ಲಿ ಕರಡಿ ಒಂದು ಕುಳಿತಿತ್ತು. ತಕ್ಷಣವೇ ಆ ಕರಡಿ ಹೇಳಿತು ನೀನೇನೂ ಹೆದರಿಕೊಳ್ಳಬೇಡ. ನೀನು ಹಾಯಾಗಿ ನಿದ್ರಿಸು. ನಾನು ನಿನ್ನನ್ನು ನೋಡಿಕೊಳ್ಳುವೆ. ಇದು ಸತ್ಯ ಎಂದಿತು.
ಮನುಷ್ಯ ಗೊರಕೆ ಹೊಡೆಯ ತೊಡಗಿದ. ಹುಲಿ ಮರದ ಕೆಳಗೆ ಕುಳಿತುಕೊಂಡಿತ್ತು. ಸ್ವಲ್ಪ ಹೊತ್ತಾದ ಮೇಲೆ ಆ ಮನುಷ್ಯನನ್ನು ಕೆಳಗೆ ತಳ್ಳಿ ಬಿಡು. ಮನುಷ್ಯ ವರ್ಗದವರು ಸದಾ ನಂಬಿಕೆಗೆ ದ್ರೋಹಿಗಳೇ. ಹೇಗಿದ್ದರೂ ಈಗ ನಿದ್ರಿಸುತ್ತಿದ್ದಾನೆ. ಅವನನ್ನು ಸಲೀಸಾಗಿ ತಳ್ಳಿ ಬಿಡು.
ನಾನು ಆತನನ್ನು ತಿಂದುಕೊಂಡು ಹೊರಟು ಹೋಗುವೆ ಎಂದಿತು. ಆಗ ಕರಡಿ ಹೇಳಿತು ಹುಲಿರಾಯ ನಿನ್ನ ಮಾತಿನಲ್ಲಿ ಸತ್ಯವಿದೆ. ಆದರೆ ನಾನವನಿಗೆ ಮಾತು ಕೊಟ್ಟಾಗಿದೆ. ಖಂಡಿತ ಆ ಮಾತನ್ನು ಮೀರಲಾರೆ. ನಾನಂತೂ ಅವನನ್ನು ತಳ್ಳುವುದಿಲ್ಲ ‘ ಎಂದಿತು.
ತುಸು ಹೊತ್ತಿನಲ್ಲೇ ಮನುಷ್ಯ ಎಚ್ಚೆತ್ತು ಕರಡಿಗೂ ನಿದ್ರಿಸಲು ಹೇಳಿದ. ನಾನು ರಕ್ಷಿಸುವೆ ಎಂದೂ ಭರವಸೆ ತಳೆದ. ಕರಡಿಯೂ ನಿದ್ರಿಸಿತು. ಆಗ ಕೆಳಗಿನಿಂದ ಹೇ, ಮನುಷ್ಯ ನೀನು ಆ ಕರಡಿಯನ್ನು ನಂಬಿರುವಿ. ಅದು ಖಂಡಿತವಾಗಿಯೂ ನಿನ್ನನ್ನು ತಿಂದೇ ಬಿಡುತ್ತದೆ. ಈಗ ಅದು ಮಲಗಿ ನಿದ್ರಿಸಿದೆ. ಈಗಲೇ ಅದನ್ನು ಕೆಳಗೆ ತಳ್ಳಿಬಿಡು. ಆಗ ನಾನದನ್ನು ತಿಂದು ಹೊರಟು ಹೋಗುವೆ. ನೀನೂ ಆಗ ಮನೆಗೆ ಹೋಗಿ ಸುಖವಾಗಿ ಇರಬಹುದು ಎಂಬುದಾಗಿ .
ಮನುಷ್ಯನಿಗೆ ಹುಲಿಯ ಮಾತು ಕೇಳಿ ಹುಚ್ಚ ಹಿಡಿದಂತಾಯಿತು. ತನಗೆ ಕರಡಿ ಮಾಡಿದ ಸಹಾಯವೂ ಮರೆತೇ ಹೋಯಿತು. ತಕ್ಷಣ ಅವನು ಕರಡಿಯನ್ನು ತಳ್ಳಿಯೇ ಬಿಟ್ಟ ಆದರೆ ಕರಡಿ ಅರ್ಧದಲ್ಲೇ ಒಂದು ಕೊಂಬೆ ಹಿಡಿದುಕೊಂಡು ನಿಂತಿತು. ಆಗ ಅದು ಮನುಷ್ಯನಿಗೆ ಮನುಷ್ಯ , ಖಂಡಿತ ನಿನ್ನನ್ನು ನಂಬಲೇಬಾರದು.
ನಾನು ನಿನಗೆ ಹುಲಿಯ ಬಾಯಿಂದ ತಪ್ಪಿಸಿ ಆಶ್ರಯಕೊಟ್ಟೆ, ನಾನು ನಿನ್ನನ್ನು ಹುಲಿಯ ಬಾಯಿಗೆ ತಳ್ಳಬಹುದಾಗಿತ್ತು. ಆದರೆ ನಾನು ಕೊಟ್ಟ ಮಾತಿಗೆ ತಪ್ಪಲಿಲ್ಲ. ಆದರೆ ನೀನು ನನಗೇ ಮೋಸಮಾಡಿ ನನ್ನನ್ನು ಹುಲಿಗೆ ಆಹಾರವಾಗಿಸಲು ನೋಡಿದಿ ಎಂದಿತು. ತಕ್ಷಣ ಮನುಷ್ಯ ಅದರೊಡನೆ ಕ್ಷಮೆ ಕೇಳಿದ.
ನೀತಿ :– ಮಾನವನಲ್ಲಿರುವ ಆದರ್ಶ ಗುಣಗಳಿಗೆ ಬೆಲೆ. ನಂಬಿಸಿ ಮೋಸ ಮಾಡಬಾರದು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.