ಪ್ರಮುಖ ಸುದ್ದಿ
ವಲಸಿಗರಿಗೆ ಸಚಿವ ಸ್ಥಾನ ನೀಡೋದು ಸಿಎಂ & ಕೇಂದ್ರಕ್ಕೆ ಬಿಟ್ಟಿದ್ದು – BSY ಸಂಪುಟ ರಚನೆಯಲ್ಲಿ ಹಸ್ತಕ್ಷೇಪ
ಸಂಪುಟ ರಚನೆಯಲ್ಲಿ ಹಸ್ತಕ್ಷೇಪ ಮಾಡಲ್ಲ – ಯಡಿಯೂರಪ್ಪ
ಗುಂಡ್ಲುಪೇಟೆಃ ಸಚಿವ ಸಂಪುಟ ರಚನೆಯಲ್ಲಿ ನನ್ನದೇನು ಹಸ್ತಕ್ಷೇಪ ಇರುವದಿಲ್ಲ. ಸಚಿವ ಸ್ಥಾನ ಯಾರಿಗೆ ನೀಡಬೇಕು ಬಿಡಬೇಕು ಎಂಬುದು ಸಿಎಂ ಬೊಮ್ಮಾಯಿ ಹಾಗೂ ಕೇಂದ್ರದ ನಾಯಕರಿಗೆ ಬಿಟ್ಟ ವಿಚಾರವೆಂದು ಮಾಜಿ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ವೇಳೆ ಬಿಎಸ್ ವೈ ಅಭಿಮಾನಿ ರವಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅವರು, ನಂತರ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಲವು ಶಾಸಕರು ಬಿಎಸ್ ವೈ ಅವರಿಗೆ ದುಂಬಾಲು ಬಿದ್ದಿದ್ದು, ಒಂದೆಡೆ ಆದರೆ, ಯಡಿಯೂರಪ್ಪನವರ ನಂಬಿ ಬಂದ 17 ಜನ ವಲಸಿಗರಿಗೆ ಮಂತ್ರಿ ಸ್ಥಾನ ನೀಡುವದು ಬಹುತೇಕ ಪಕ್ಕ ಎನ್ನಲಾಗಿದ್ದು, ವಲಿಸಗರಲ್ಲಿ ಡವಡವ ಹೆಚ್ಚಾಗಿದೆ.