ಪ್ರಮುಖ ಸುದ್ದಿ
ಬೆಳ್ಳಂಬೆಳಗ್ಗೆ ಶಾಸಕ ಜಮೀರ ಅಹ್ಮದ್ ಖಾನ್ ಮನೆ ಮೇಲೆ ಐಟಿ ದಾಳಿ
ಬೆಳ್ಳಂಬೆಳಗ್ಗೆ ಶಾಸಕ ಜಮೀರ ಅಹ್ಮದ್ ಖಾನ್ ಮನೆ ಮೇಲೆ ಐಟಿ ದಾಳಿ
ಬೆಂಗಳೂರಃ ಕಾಂಗ್ರೆಸ್ ಶಾಸಕ ಜಮೀರ ಅಹ್ಮದ್ ಖಾನ್ ಮನೆ ಮತ್ತು ಕಚೇರಿ ಮೇಲೆ ಇಂದು ಬೆಳಗಿನಜಾವ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೋಧನೆ ನಡೆಸುತ್ತಿದೆ.
ತೆರಿಗೆ ವಂಚನೆ ಆರೋಪದ ಮೇಲೆ ದಾಳಿ ನಡೆದಿದ್ದು, ಜಮೀರ ಅಹ್ಮದ್ ಅವರು ನ್ಯಾಷನಲ್ ಟ್ರಾವೆಲ್ಸ್ ಹೆಸರಿನಲ್ಲಿ ಸಾರಿಗೆ ಉದ್ಯಮ ಹೊಂದಿದ್ದಾರೆ.
ಶಿವಾಜಿ ನಗರದ ಅವರ ಮನೆ ಮತ್ತು ಕಚೇರಿ ಸೇರಿದಂತೆ ಹಲವಡೆ ಅವರ ಫ್ಲ್ಯಾಟ್ ಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಅಧಿಕಾರಿಗಳು ದಾಖಲೆ ಪತ್ರಗಳ ತಪಾಸಣೆ ನಡೆಸುತ್ತಿದೆ.