ಪ್ರಮುಖ ಸುದ್ದಿ
ನನ್ನ ಭೇಟಿಗೆ ಬರುವ ಕಾರ್ಯಕರ್ತರು ಪುಸ್ತಕ ತನ್ನಿ – ಸಚಿವ ಶಂಕರ ಪಾಟೀಲ್
ನನ್ನ ಭೇಟಿಗೆ ಬರುವ ಕಾರ್ಯಕರ್ತರು ಪುಸ್ತಕ ತನ್ನಿ – ಸಚಿವ ಶಂಕರ ಪಾಟೀಲ್
ಬೆಂಗಳೂರಃ ಸಚಿವನಾಗಿ ಮೊದಲ ಬಾರಿಗೆ ಧಾರವಾಡಕ್ಕೆ ತೆರಳುತ್ತಿರುವ ಸಂದರ್ಭ ನನ್ನ ಭೇಟಿಗೆ ಬರುವ ಕಾರ್ಯಕರ್ತರು ಶಾಲು, ಹಾರ ತುರಾಯಿ ಬದಲು ಪುಸ್ತಕ ತೆಗೆದುಕೊಂಡು ಬನ್ನಿ ಎಂದು ಸಚಿವ ಶಂಕರ ಪಾಟೀಲ್ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಸ್ತಕ ನೀಡುವ ಮೂಲಕ ಶುಭಕೋರಿ, ನಾನು ಬಂದಂತ ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡುವೆ ಎಂದು ತಿಳಿಸುವ ಮೂಲಕ ನೂತನ ಸಚಿವರು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.
ಪುಸ್ತಕದಿಂದ ಜ್ಞಾನಾರ್ಜನೆ ಆಗಲಿದೆ. ಹಾರ, ಶಾಲು ತುರಾಯಿಗಿಂತ ಒಂದು ಪುಸ್ತಕ ಮನುಷ್ಯನ ಬದುಕನ್ನೆ ಬದಲಾಯಿಸಲಿದೆ ಎಂದಿದ್ದಾರೆ.