ಪ್ರಮುಖ ಸುದ್ದಿ
ಶಾಲು, ಹಾರ ತುರಾಯಿಗೆ ಇನ್ಮುಂದೆ ಬ್ರೇಕ್ – ಸರ್ಕಾರಿ ಆದೇಶ
ಶಾಲು, ಹಾರ ತುರಾಯಿಗೆ ಇನ್ಮುಂದೆ ಬ್ರೇಕ್ – ಸರ್ಕಾರಿ ಆದೇಶ
ಬೆಂಗಳೂರಃ ಸರ್ಕಾರಿ ಕಾರ್ಯಕ್ರಮ, ಸಭೆ ಸಮಾರಂಭದಲ್ಲಿ ಇನ್ಮುಂದೆ ಶಾಲು, ಹೂಗುಚ್ಛ, ಹಾರ ತುರಾಯಿ ಹಾಕಿ ಸನ್ಮಾನ ಮಾಡುವಂತಿಲ್ಲ. ಈ ಕುರಿತು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ದುಂದುವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸನ್ಮಾನದ ಹೆಸರಿನಲ್ಲಿ ಖರ್ಚು ವೆಚ್ಷಗಳು ಜಾಸ್ತಿಯಾಗುತ್ತಿರುವ ಕಾರಣ ಯಾವುದೇ ಸರ್ಕಾರಿ ಸಭೆ ಸಮಾರಂಭಗಳಲ್ಲಿ ಶಾಲು, ಹೂಗುಚ್ಛ, ಹಾರ ತುರಾಯಿ ಹಾಕುವಂತಿಲ್ಲ.
ಮತ್ತು ಸರ್ಕಾರಿ ಸ್ವಾಮ್ಯಕ್ಕೊಳಪಟ್ಟ ಸಂಘ ಸಂಸ್ಥೆಗಳಿಗೂ ಸಹ ಈ ಆದೇಶ ಹೊರಡಿಸಲಾಗಿದ್ದು, ದುಂದುವೆಚ್ಚಕ್ಕೆ ಕಡಿವಾಣ ಹಾಕಲು ತಾವೆಲ್ಲರೂ ಸಹಕರಿಸಬೇಕೆಂದು ರಾಜ್ಯ ಸರ್ಕಾರ ಕೋರಿದೆ.
ಸನ್ಮಾನದಿಂದ ವೆಚ್ಷವಲ್ಲದೆ ಸಮಯವು ಹಾಳಾಗುತ್ತಿದೆ. ಸರ್ಕಾರಿ ಆದೇಶವನ್ನು ಹಲವರು ಸ್ವಾಗತಿಸಿದ್ದು, ರಾಜ್ಯ ಸರ್ಕಾರದ ನಿರ್ಣಯ ಉತ್ತಮವಾಗಿದೆ ಎಂದಿದ್ದಾರೆ.