ಪ್ರಮುಖ ಸುದ್ದಿ
ಮೈಸೂರ – ಬೆಂಗಳೂರ ಆರ್ಥಿಕ ಕಾರಿಡಾರ ಅ.2022 ರೊಳಗೆ ಪೂರ್ಣ
ಮೈಸೂರ – ಬೆಂಗಳೂರ ಆರ್ಥಿಕ ಕಾರಿಡಾರ ಅ.2022 ರೊಳಗೆ ಪೂರ್ಣ
ವಿವಿ ಡೆಸ್ಕ್ಃ 10-ಲೇನ್ ಬೆಂಗಳೂರು-ಮೈಸೂರು ಆರ್ಥಿಕ ಕಾರಿಡಾರ್ ಅನ್ನು ದಾಖಲೆ ವೇಗದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
8172 ಕೋಟಿ ರೂಪಾಯಿ ವೆಚ್ಚದ ಆರ್ಥಿಕ ಕಾರಿಡಾರ್ ಕಾಮಗಾರಿ ಇದಾಗಿದ್ದು, ಅಕ್ಟೋಬರ್ 2022 ರೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.
ಇದು ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಪ್ರಸ್ತುತ 3 ಗಂಟೆಗಳಿಂದ ಕೇವಲ 90 ನಿಮಿಷಗಳಿಗೆ ಅರ್ಧದಷ್ಟು ಕಡಿಮೆ ಮಾಡುತ್ತದೆ. ಇದೊಂದು ಮಹತ್ವ ಮೈಲಿಗಲ್ಲು ಎಂದಿದ್ದಾರೆ