ಪ್ರಮುಖ ಸುದ್ದಿ
ಶಹಾಪುರಃ ಸಂಭ್ರಮದ ನಾಗರ ಪಂಚಮಿ ಆಚರಣೆ
ಶಹಾಪುರಃ ಸಂಭ್ರಮದ ನಾಗರ ಪಂಚಮಿ ಆಚರಣೆ
yadgiri,ಶಹಾಪುರಃ ನಗರದಲ್ಲಿ ನಾಗರಪಂಚಮಿ ಹಬ್ಬದಂಗವಾಗಿ ಮಹಿಳೆಯರು, ಯುವತಿಯರು, ಮಕ್ಕಳು ಶ್ರದ್ಧಾ ಭಕ್ತಿಯಿಂದ ನಾಗರ ಕಟ್ಟೆಗೆ ತೆರಳಿ ಹಾಲೆರೆದು ಆಚರಿಸಿದರು.
ಕೊರೊನಾ ಆತಂಕ ನಡುವೆಯೇ ಕೆಲ ಮಹಿಳೆಯರು ಮುಖಕ್ಕೆ ಮಾಸ್ಕ್ ಧರಿಸಿದರೆ, ಇನ್ನೂ ಕೆಲವರು ಹಾಗೇ ಹಾಲೆರಿಯಲು ತೆರಳಿರುವದು ಕಂಡು ಬಂದಿತು. ಸ್ಥಳೀಯ ನಾಗರ ಕೆರೆ ಬಳಿಯ ನಾಗರ ಕಟ್ಟೆ, ಶೀಲವಂತೇಶ್ವರ ಬೆಟ್ಟದ ನಾಗರ ಕಟ್ಟೆ ಮತ್ತು ಜಾಲಗಾರ ಮೊಹಲ್ಲಾದ ಲಾಲಸಾಹೇಬ ಮಸೀದಿ ಬಳಿಯ ನಾಗರಕಟ್ಟೆ ಸೇರಿದಂತೆ ಶರಣಬಸವೇಶ್ವರ ನಗರ, ಹಳಿಸಗರ, ಬಸವೇಶ್ವರ ನಗರದಲ್ಲಿ ಸಮೀಪದ ನಾಗದೇವತೆ ಕಟ್ಟೆ, ದೇವಸ್ಥಾನಗಳಿಗೆ ತೆರಳಿ ಹಾಲೆರೆದು ನೈವೇದ್ಯ ಸಮರ್ಪಿಸುವ ಮೂಲಕ ಹಬ್ಬ ಆಚರಿಸಿದರು.
ಕಳೆದ ಬಾರಿ ಕೊರೊನಾ ಆರ್ಭಟ ಜಾಸ್ತಿ ಇದ್ದ ಕಾರಣ ಮಂದಹಾಸದ ಆತಂಕದ ನಡುವೆ ನಾಗರ ಪಂಚಮಿ ಆಚರಣೆ ಮಾಡಲಾಗಿತ್ತು. ಈ ಬಾರಿ ಒಂದಿಷ್ಟು ಖುಷಿಯಿಂದಲೇ ಕೊರೊನಾ ಆತಂಕ ಮರೆತು ಜನ ಸಾಂಪ್ರದಾಯಿಕ ಪೂಜಾ ವಿಧಿವಿಧಾನದಲ್ಲಿ ಭಾಗವಹಿಸುವ ಮೂಲಕ ಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.